ರಾಯಚೂರು: ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಗಳು ಕಲ್ಲು ಕ್ವಾರಿಯ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಮಾನ್ವಿಯಲ್ಲಿ ನಡೆದಿದೆ.
ಮಾನ್ವಿ ಪಟ್ಟಣದ ಅಕ್ಬರ್ ಸಾಬ್ ಕಂಕರ್ ಮಿಲ್ ಹತ್ತಿರ ಈ ದುರ್ಘಟನೆ ನಡೆದಿದೆ. ಪಟ್ಟಣದ ಬೆಳಗಂಪೇಟೆ ನಿವಾಸಿಗಳಾದ ಲಕ್ಷ್ಮಿ(41) ಹಾಗು ಮಗಳು ಮಲ್ಲಮ್ಮ(12) ಸಾವನ್ನಪ್ಪಿದ್ದಾರೆ. ಬಾವಿಯಂತೆ ಬಳಸುತ್ತಿದ್ದ ಕಲ್ಲು ಕ್ವಾರಿಯ ಗುಂಡಿಯಲ್ಲಿ ತಾಯಿ ಲಕ್ಷ್ಮಿ ಕಾಲು ಜಾರಿ ಬಿದ್ದಿದ್ದರು. ತಾಯಿಯನ್ನ ಕಾಪಾಡಲು ಹೋಗಿ ಮಗಳು ಸಹ ಪ್ರಾಣ ಬಿಟ್ಟಿದ್ದಾಳೆ.
ಸದ್ಯ ಮೃತ ದೇಹಗಳನ್ನ ಹೊರಗೆ ತೆಗೆಯಲಾಗಿದೆ.ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.