ಕಾರವಾರ: ಸಂಪ್ರದಾಯದ ಕಟ್ಟುಪಾಡುಗಳನ್ನೆಲ್ಲಾ ಮೀರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆಯ (Father) ಅಂತ್ಯಸಂಸ್ಕಾರವನ್ನು ಮಗಳು (Daughter) ನೇರವೆರಿಸಿದ್ದಾಳೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ಇಂದು ಈ ಘಟನೆ ನಡೆದಿದೆ. ಮಂಜುನಾಥ್ ನಾಗಪ್ಪ ನಾಯ್ಕ್ (51) ಎಂಬವವರು ನಿನ್ನೆ ದಿನ ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆ ಮೂವರು ಹೆಣ್ಣುಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಇದನ್ನೂ ಓದಿ: ವೋಟರ್ ಲಿಸ್ಟ್ ಹಗರಣ – ಮುಖ್ಯ ಆರೋಪಿ ರವಿಕುಮಾರ್ ಆಪ್ತ ಲೋಕೇಶ್ ಬಂಧನ
Advertisement
Advertisement
ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳೇ ಅಂತ್ಯಸಂಸ್ಕಾರ ಮಾಡುವುದು ಸಂಪ್ರದಾಯ. ಮಂಜುನಾಥ್‌ಗೆ ಗಂಡು ಮಕ್ಕಳು ಯಾರು ಇಲ್ಲದಿದ್ದರಿಂದ ರಕ್ತ ಸಂಬಂಧಿಗಳಲ್ಲಿ ಯಾರಾದರೂ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿತ್ತು. ಆದರೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಸಂಪ್ರದಾಯಕ್ಕೆ ಕಟ್ಟುಬೀಳದೇ ಹಿರಿಯ ಮಗಳು ಶ್ವೇತಾ ನಾಗಪ್ಪ ನಾಯ್ಕ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಗಂಡಿನಷ್ಟೇ ತಾವೂ ಸಮರ್ಥರು ಎಂಬುದನ್ನು ತೋರಿಸಿಕೊಟ್ಟು ಸಮಾಜದ ಮಹಿಳೆಯರಿಗೆ ಮಾದರಿಯಾದರು. ಇದನ್ನೂ ಓದಿ: ಮಾನ, ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ