ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಮೂಲಕ ಕೆ.ಎಂ ಶಶಿಧರ್ ನಿರ್ಮಾಣ ಮಾಡಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ನಾಯಕಿಯಾಗಿ ನಟಿಸಿರೋ ಈ ಚಿತ್ರವೀಗ ಎಲ್ಲ ದಿಕ್ಕಿನಲ್ಲಿಯೂ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಅದುವೇ ಪ್ರೇಕ್ಷಕರನ್ನು ಕೈ ಹಿಡಿದು ಥೇಟರಿಗೆ ಕೈ ಹಿಡಿದು ಕರೆ ತರುವ ನಿರೀಕ್ಷೆಗಳೂ ದಟ್ಟವಾಗಿವೆ.
Advertisement
ಇದು ಶಂಕರ್ ಜೆ ನಿರ್ದೇಶನದ ಚೊಚ್ಚಲ ಚಿತ್ರ. ಮೊದಲ ಪ್ರಯತ್ನದಲ್ಲಿಯೇ ಅವರು ಹೊಸಾ ಥರದ ಕಥೆಯೊಂದನ್ನು ಕಮರ್ಶಿಯಲ್ ಶೈಲಿಯಲ್ಲಿಯೇ ಹೇಳಲು ಮುಂದಾಗಿದ್ದಾರೆ. ಈ ಚಿತ್ರ ಆರಂಭ ಕಾಲದಿಂದಲೂ ಹರಿಪ್ರಿಯಾ ಅವರ ಗೆಟಪ್ಪುಗಳ ಝಲಕ್ಕಿನಿಂದಲೇ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿತ್ತು. ಟಾಮ್ ಬಾಯ್ ಲುಕ್ ಅಂತೂ ಎಲ್ಲರನ್ನೂ ಸೆಳೆದುಕೊಂಡಿತ್ತು. ಇದನ್ನೂ ಓದಿ: ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!
Advertisement
ಈ ಚಿತ್ರದಲ್ಲಿ ಹರಿಪ್ರಿಯಾ ಎರಡು ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಷ್‍ಬ್ಯಾಕ್‍ನಲ್ಲಿ ಕಾಲೇಜು ಹುಡುಗಿಯಾಗಿ ಟಾಮ್ ಬಾಯ್ ಲುಕ್‍ನಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನುಳಿದಂತೆ ಎಂಥಾದ್ದೇ ಪ್ರಕರಣವನ್ನಾದರೂ ಲೀಲಾಜಾಲವಾಗಿ ಬೆಂಬೀಳುವ ಖಡಕ್ ಸಿಐಡಿ ಅಧಿಕಾರಿಯಾಗಿಯೂ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನೆಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಹರಿಪ್ರಿಯಾ ಪಾತ್ರದ ಹೆಸರು ವೈದೇಹಿ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!
Advertisement
Advertisement
ಇಲ್ಲಿ ಕ್ರೈಂ ಥ್ರಿಲ್ಲರ್ ಕಥೆಯ ಜೊತೆ ಜೊತೆಗೇ ತಾಯಿ ಮಗಳ ಸೆಂಟಿಮೆಂಟ್ ದೃಶ್ಯಗಳೂ ಪ್ರಧಾನವಾಗಿರಲಿದೆ. ಸಾಮಾನ್ಯವಾಗಿ ಪೊಲೀಸ್ ಪಾತ್ರವೆಂದಾಕ್ಷಣ ಅಬ್ಬರ ಅರಚಾಟಗಳಿರುತ್ತವೆಂಬ ವಾತಾವರಣವಿದೆ. ಆದರೆ ಸೂಕ್ಷ್ಮ ಸಂವೇದನೆ ಹೊಂದಿರೋ ಈ ಪಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿ ನೋಡುಗರೆಲ್ಲರ ಆಳಕ್ಕಿಳಿಯುವಷ್ಟು ಸಶಕ್ತವಾಗಿದೆ ಎಂಬುದು ಚಿತ್ರತಂಡದ ಭರವಸೆ.