ಪ್ರೀತಿಸಿದವನ ಜೊತೆ ಮನೆಬಿಟ್ಟು ಹೋದ ಮಗಳು – ತಂದೆ ನೇಣಿಗೆ ಶರಣು

Public TV
1 Min Read
Anekal Suicide

ಆನೇಕಲ್: ಮಗಳು (Daughter) ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ಮನನೊಂದ ತಂದೆ (Father) ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ (Anekal) ಪಟ್ಟಣದ ಚಿಕ್ಕಕೆರೆ ಅಂಗಳದಲ್ಲಿ ನಡೆದಿದೆ.

ನಾರಾಯಣಪುರ ಗ್ರಾಮದ ನಿವಾಸಿ ಗೋಪಾಲ್ ನೇಣಿಗೆ ಶರಣಾದ ತಂದೆ. ಗೋಪಾಲ್ ನೇಕಾರಿಕೆ ಕೆಲಸ ಮಾಡಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಮಗಳು ಮನೆ ಬಿಟ್ಟು ಹೋಗಿದ್ದಳು. ಇದೇ ವಿಚಾರವಾಗಿ ಮನನೊಂದಿದ್ದ ಗೋಪಾಲ್ ಬೆಳಗ್ಗೆ ಮನೆಯಿಂದ ಹೊರಹೋಗಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮರ್ಯಾದಾ ಹತ್ಯೆ; ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ತಂದೆ

ಚಿಕ್ಕಕೆರೆ ಅಂಗಳದಲ್ಲಿನ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ಒಬ್ಬ ಮಹಾ ಸುಳ್ಳುಗಾರ: ಸಚಿವ ತಂಗಡಗಿ ವಾಗ್ದಾಳಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article