ಚೆನ್ನೈ: ಫೇಸ್ ಬುಕ್ ಗೆಳೆಯನೊಂದಿಗೆ ಓಡಿಹೋಗುವುದನ್ನು ತಡೆದಿದ್ದಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಸೋಮವಾರ ನಡೆದಿದೆ.
ಭಾನುಮತಿ ಮಗಳಿಂದ ಕೊಲೆಯಾದ ತಾಯಿ. ಆಂಜನೇಯಪುರಂ ನಿವಾಸಿ, 19 ವರ್ಷದ ದೇವಿ ಪ್ರಿಯಾ ತಾಯಿಯನ್ನೇ ಕೊಲೆ ಮಾಡಿದ್ದಾಳೆ.
Advertisement
ಪ್ರಿಯಾಗೆ ಆರು ತಿಂಗಳ ಹಿಂದೇ ಫೇಸ್ ಬುಕ್ ನಲ್ಲಿ ವಿವೇಕ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಸದಾ ಮೊಬೈಲಿನಲ್ಲಿದ್ದ ಮಗಳನ್ನು ಪೋಷಕರು ಗಮನಿಸಿದ್ದರು. ನಂತರ ಪೋಷಕರು ಮನೆಯಿಂದ ಹೊರ ಹೋಗದಂತೆ ಮತ್ತು ಮೊಬೈಲ್ ಬಳಸದಂತೆ ಪ್ರಿಯಾಗೆ ನಿರ್ಬಂಧ ಹಾಕಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
Advertisement
ಪ್ರಿಯಾ ಈ ವಿಚಾರವನ್ನು ವಿವೇಕ್‍ಗೆ ತಿಳಿಸಿದ್ದಾಳೆ. ಆಗ ವಿವೇಕ್ ತಕ್ಷಣ ನೀನು ಮನೆಯಿಂದ ಬಾ ಇಬ್ಬರು ಓಡಿ ಹೋಗೋಣ ಎಂದು ಹೇಳಿದ್ದಾನೆ. ಅದರಂತೆಯೇ ವಿವೇಕ್ ಸೋಮವಾರ ಸಂಜೆ ಪ್ರಿಯಾಳನ್ನು ಕುಂಬಕೋಣಂಗೆ ಕರೆದುಕೊಂಡು ಬರುವಂತೆ ತನ್ನ ಸ್ನೇಹಿತರಾದ ವಿಘ್ನೇಶ್ ಮತ್ತು ಸತೀಶ್ ಇಬ್ಬರನ್ನು ಕಳುಹಿಸಿದ್ದಾನೆ.
Advertisement
ಇತ್ತ ಮನೆಯಿಂದ ಓಡಿಹೋಗಲು ಪ್ರಿಯಾ ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡು ಸಿದ್ಧಳಾಗಿದ್ದಳು. ಆಗ ಪ್ರಿಯಾ ತಾಯಿ ಭಾನುಮತಿ ಮಗಳು ಬಿಟ್ಟು ಹೋಗುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಪ್ರಿಯಾ ಅಡುಗೆ ಮನೆಯಿಂದ ಚಾಕು ತೆಗೆದುಕೊಂಡು ಬಂದು ತಾಯಿಗೆ ಇರಿದು ಕೊಲೆ ಮಾಡಿದ್ದಾಳೆ.
ಪ್ರಿಯಾ ಕೊಲೆ ಮಾಡಿದ್ದನ್ನು ಇಬ್ಬರು ಸ್ನೇಹಿತರು ನೋಡಿ ಮನೆಯಿಂದ ಪರಾರಿಯಾಗಿದ್ದಾರೆ. ಆದರೆ ನೆರೆಹೊರೆಯವರು ಅವರ ಶರ್ಟ್ ಮೇಲೆ ಇದ್ದ ರಕ್ತದ ಕಲೆಯನ್ನು ನೋಡಿ ತಕ್ಷಣ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ದೇವಿ ಪ್ರಿಯಾ, ವಿವೇಕ್, ವಿಘ್ನೇಶ್ ಮತ್ತು ಸತೀಶ್ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಿಯಾ ತಂದೆ ಶಿವಗುರುನಾಥನ್, ತಾಯಿ ಭಾನುಮತಿ ಮತ್ತು ಸಹೋದರಿ ಚಾಮುಂಡೇಶ್ವರಿ ಜೊತೆ ವಾಸಿಸುತ್ತಿದ್ದಳು. ವಿವೇಕ್ ಕುಂಬಕೋಣಂ ನಿವಾಸಿಯಾಗಿದ್ದು, ಬಟ್ಟೆಶಾಪ್ ನಲ್ಲಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv