ʻತಾಯಿ ನಮ್ಮತ್ತೆ ಬೇಗ ಸಾಯಲಿʼ – 20 ರೂ. ನೋಟ್‌ ಮೇಲೆ ಬರೆದು ಹರಕೆ ಹೊತ್ತ ಸೊಸೆ!

Public TV
1 Min Read
Kalaburagi 3

ಕಲಬುರಗಿ: ʻತಾಯಿ ನಮ್ಮ ಅತ್ತೆ ಬೇಗ ಸಾಯಬೇಕುʼ ಅಂತಾ ನೋಟ್ ಮೇಲೆ ಬರೆದು ಹುಂಡಿಗೆ ಕಾಣಿಕೆ ಹಾಕಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರದ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿ ಈ ನೋಟ್ (currency) ಪತ್ತೆಯಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಹಿಳೆ 20 ರೂ. ನೋಟ್ ಮೇಲೆ ಅತ್ತೆ ಸಾಯಲೆಂದು ಬರಹ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಹರಕೆ ಮಾಡಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ

ಗುರುವಾರ (ಡಿ.26) ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಹರಕೆ ಹೊತ್ತು ಕಾಣಿಕೆ ಅರ್ಪಿಸಿರುವ ನೋಟ್ ಪತ್ತೆಯಾಗಿದೆ. ಸದ್ಯ ಈ ಲೆಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರ ಬರೆದ ಸೊಸೆ ಯಾರು ಅಂತಾ ಜನಸಾಮಾನ್ಯರು ಮಾತನಾಡುತ್ತಿದ್ದಾರೆ‌. ಇದನ್ನೂ ಓದಿ: ಎಲ್‌ಐಸಿ ಹಣಕ್ಕಾಗಿ ತಂದೆಯನ್ನೆ ಕೊಂದ ಮಗ – ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಮಗ ಆತ್ಮಹತ್ಯೆ!

Share This Article