ಅಪ್ಪ-ಮಗಳನ್ನು ಒಂದೇ ಬಾರಿ ಸ್ಕ್ರೀನ್ ಮೇಲೆ ನೋಡುವ ಸೌಭಾಗ್ಯ ಸಿಕ್ಕಿದೆ ಶಾರುಖ್ (Shah Rukh Khan) ಅಭಿಮಾನಿಗಳಿಗೆ. ಬಾಲಿವುಡ್ ನಟ ಶಾರುಖ್ ಮತ್ತು ಪುತ್ರಿ ಸುಹಾನಾ ಖಾನ್ (Suhana Khan) ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ಮಗಳು ಆ ಚಿತ್ರಕ್ಕೆ ನಾಯಕಿಯಾದರೆ, ಅಪ್ಪ ವಿಲನ್ ಎನ್ನುವ ಮಾಹಿತಿ ಹರಿದಾಡುತ್ತಿದೆ.
Advertisement
ಪಠಾಣ್, ಜವಾನ್ ಚಿತ್ರದ ಸಕ್ಸಸ್ ನಂತರ ಡಂಕಿ ಸಿನಿಮಾ ರಿಲೀಸ್ಗೆ ತಯಾರಾಗಿದೆ. ಈ ಸಿನಿಮಾಗಳಲ್ಲಿ ಶಾರುಖ್ ಬ್ಯುಸಿಯಿದ್ರೆ, ಇತ್ತ ಸುಹಾನಾ ನಟಿಸಿದ ಮೊದಲ ಸಿನಿಮಾ ‘ಆರ್ಚೀಸ್’ ರಿಲೀಸ್ ಆಗುವ ಮುನ್ನವೇ ಮತ್ತೊಂದು ಬಿಗ್ ಆಫರ್ ಸುಹಾನಾ ಬಾಚಿಕೊಂಡಿದ್ದಾರೆ.
Advertisement
Advertisement
ಹೊಸ ಚಿತ್ರದಲ್ಲಿ ಶಾರುಖ್- ಸುಹಾನಾ ಜೊತೆಯಾಗಿ ನಟಿಸುತ್ತಿದ್ದಾರೆ. ರೀಲ್ನಲ್ಲಿಯೂ ಕೂಡ ತಂದೆ- ಮಗಳಾಗಿಯೇ ಬಣ್ಣ ಹಚ್ಚಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಇಬ್ಬರ ಕಾಂಬೋ ಚಿತ್ರಕ್ಕೆ ‘ಕಿಂಗ್’ (King) ಎಂದು ಕ್ರೇಜಿ ಟೈಟಲ್ ಇಟ್ಟಿದ್ದಾರೆ.
Advertisement
ಈ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ಶೂಟಿಂಗ್ ಶುರುವಾಗಲಿದೆ. ಈ ಚಿತ್ರವೂ ಆ್ಯಕ್ಷನ್ ಜೊತೆ ಥ್ರಿಲ್ಲಿಂಗ್ ಆಗಿ ಮೂಡಿ ಬರಲಿದೆ. ಒಟ್ನಲ್ಲಿ ಈ ಸುದ್ದಿ ಕೇಳಿ ಕಿಂಗ್ ಖಾನ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.