ಬೆಂಗಳೂರು: ಇತ್ತೀಚೆಗೆ ಗೆಳೆಯನ ಜೊತೆ ಸೇರಿಕೊಂಡು ಮಗಳೇ ತಂದೆಯನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಗಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಿಲ್ಲಿಸಿ ಬಾಂಗ್ಲಾದೇಶದಿಂದ ನಗರಕ್ಕೆ ಬಂದು ಕಿಡ್ನಿ ದಾನ ಮಾಡಿದ್ದಾಳೆ.
ಸೊರ್ಬೋಜಯ ಸಿತಿ ದೇಬ್(26) ತಾಯಿಗೆ ಕಿಡ್ನಿ ದಾನ ಮಾಡಿದ ಮಗಳು. ದೇಬ್ ತಾನು ಮದುವೆಯಾಗುವ ಹುಡುಗನ ವಿರೋಧದ ನಡುವೆಯೂ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ತಾಯಿ ಶಿಖಾ ರಾಣಿಗೆ ತನ್ನದೊಂದು ಕಿಡ್ನಿ ದಾನ ಮಾಡಿದ್ದಾಳೆ. ಈ ಮೂಲಕ ತಾಯಿಯ ಪ್ರಾಣ ಉಳಿಸಿದ್ದಾಳೆ. “ತಾಯಿ ಇಲ್ಲದೆ ನನ್ನ ಜೀವನವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲಿಗೆ ಅಮ್ಮ ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸಲು ಒಂದು ವರ್ಷ ಬೇಕಾಯಿತು” ಎಂದು ಓಲ್ಡ್ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ತಾಯಿ ಜೊತೆಗೆ ಚೇತರಿಸಿಕೊಳ್ಳುತ್ತಿರುವ ಮಗಳು ವೇಬ್ ತಿಳಿಸಿದ್ದಾಳೆ. ಇದನ್ನೂ ಓದಿ: ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ
Advertisement
Advertisement
“ನನ್ನ ತಾಯಿ ತಾನು ಕಿಡ್ನಿ ಸಮಸ್ಯೆಯಿಂದ ಸಾಯುತ್ತೇನೆಂದು ನನ್ನ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು. ಆದರೆ ಅವರು ಕಿಡ್ನಿ ಪಡೆಯಲು ಒಪ್ಪಿದ ನಂತರ, ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದ ಹುಡುಗನ ಕುಟುಂಬಕ್ಕೆ ನನ್ನ ನಿರ್ಧಾರವನ್ನು ತಿಳಿಸಿದೆ. ಆದರೆ ಇದಕ್ಕೆ ಅವರು ಒಪ್ಪಲಿಲ್ಲ. ಕೊನೆಗೆ ನಾನು ನಿಶ್ಚಿತಾರ್ಥ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಯಾಕೆಂದರೆ ನನ್ನ ತಾಯಿಗಿಂತ ನನಗೆ ಬೇರೆನೂ ಮುಖ್ಯವಲ್ಲ” ಎಂದು ಹೇಳಿದ್ದಾಳೆ. ಇದನ್ನೂ ಓದಿ: ಈ ತಾಯಿ ತನ್ನ ಮಗಳಿಗಾಗಿ ಮಾಡಿದ ತ್ಯಾಗಕ್ಕೆ ಮಹಿಳಾ ದಿನಾಚರಣೆಯಂದು ಸನ್ಮಾನ
Advertisement
ಇದೊಂದು ಅಪರೂಪದ ಸಂಗತಿಯಾಗಿದೆ, ಯಾಕೆಂದರೆ ಸಾಮಾನ್ಯವಾಗಿ ಮಹಿಳೆಯರು ತಮ್ಮ ಅಂಗಾಂಗಗಳನ್ನು ದಾನ ಮಾಡುತ್ತಾರೆ. ಆದರೆ ಅವಿವಾಹಿತ ಯುವತಿಯ ಕಿಡ್ನಿ ದಾನಕ್ಕೆ ಒಪ್ಪುವುದಿಲ್ಲ. ಇದರಿಂದ ಭವಿಷ್ಯದಲ್ಲಿ ಅವರ ಆರೋಗ್ಯದ ಪರಿಣಾಮ ಬೀರುತ್ತದೆ ಎಂದು ಯಾರು ಒಪ್ಪುವುದಿಲ್ಲ. ದೇಬ್ ಕಿಡ್ನಿ ದಾನ ಮಾಡಲು ನಿರ್ಧರಿಸಿದಾಗ ಆಕೆಯ ಜೊತೆ ಅನೇಕ ಬಾರಿ ಸಮಾಲೋಚನೆ ನಡೆಸಿದ್ದೇನೆ. ನಂತರ ನಾವು ಕಿಡ್ನಿ ದಾನ ಮಾಡಲು ಒಪ್ಪಿಕೊಳ್ಳಲಾಯಿತು. ಅಂತಹ ಮಗಳನ್ನು ಪಡೆದ ಪೋಷಕರನ್ನು ಅಭಿನಂದಿಸುವುದಾಗಿ ನೆಪ್ರೋಲಾಜಿಸ್ಟ್ ಡಾ. ಶಂಕರನ್ ಸುಂದರ್ ತಿಳಿಸಿದ್ದಾರೆ.
Advertisement
2015 ರಲ್ಲಿ ಶಿಖಾ ರಾಣಿಗೆ ಬಾಂಗ್ಲಾದೇಶದಲ್ಲಿ ಕಿಡ್ನಿ ಕಾಯಿಲೆ ಕಂಡು ಬಂದಿತ್ತು. ನಂತರ ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ತೋರಿಸಲಾಗಿತ್ತು. ವೈದ್ಯರು ಅವರಿಗೆ ಕಿಡ್ನಿ ಬದಲಾಯಿಸಬೇಕೆಂದು ಸೂಚಿಸಿದ್ದರು. ಆದರೆ ಹಣದ ಕೊರತೆಯಿಂದ ದಾನಿಗಳು ಸಿಗಲಿಲ್ಲ. ಕೊನೆಗೆ 2018 ರಲ್ಲಿ ದಂಪತಿಯ ಕಿರಿಯ ಮಗಳಾದ ವೇಬ್ ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿದ್ದಳು. ಈಗ ತಾಯಿ ಮತ್ತು ಮಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ.