ರಾಮನಗರ: ತಾಯಿಯ ಸಾವಿನ ಸುದ್ದಿ ಕೇಳಿದ ಮಗಳು ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲುಕುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ನಡೆದಿದೆ.
ಪುಟ್ಟಲಿಂಗಮ್ಮ(75) ಎಂಬುವವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಸುದ್ದಿ ಕೇಳಿದ ಮಗಳು ಪದ್ಮಮ್ಮ (59)ಕೂಡ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
Advertisement
ಸ್ವಗ್ರಾಮದಲ್ಲಿ ಇಂದು ಪುಟ್ಟಲಿಂಗಮ್ಮನವರ ಅಂತ್ಯಕ್ರಿಯೆ ನಡೆದಿದ್ದು, ನಾಳೆ ಪದ್ಮಮ್ಮನವರ ಅಂತ್ಯಕ್ರಿಯೆ ನಡೆಯಲಿದೆ. ತಾಯಿ-ಮಗಳ ಸಾವಿನಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಇದನ್ನೂ ಓದಿ: ಮಗನ ಶವಯಾತ್ರೆಯ ವೇಳೆ ಹೃದಯಾಘಾತವಾಗಿ ತಂದೆಯೂ ಸಾವು
Advertisement