ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ

Public TV
1 Min Read
tea in steel glass

ಬೆಂಗಳೂರು: ಗಂಡನ ಮೇಲಿನ ಕೋಪಕ್ಕೆ ಪತ್ನಿಯೊಬ್ಬಳು ಮಗು ಜೊತೆ ಇಲಿ ಪಾಷಾಣ ಬೆರೆಸಿದ ಚಹಾವನ್ನು ಕುಡಿದ ಘಟನೆ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ 1 ವರ್ಷ 8 ತಿಂಗಳ ಮಗು ಚಾರ್ವಿ ಮೃತಪಟ್ಟರೆ ತಾಯಿ ಚಂದ್ರಿಕಾ (26) ಆಸ್ಪತ್ರೆ ಪಾಲಾಗಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

 

ಬೆಂಗಳೂರಿನ ತಿಗಳರಪಾಳ್ಯದಲ್ಲಿ ಯೋಗೇಶ್, ಚಂದ್ರಿಕಾ ದಂಪತಿ ನೆಲೆಸಿದ್ದರು. ಜಗಳ ಮಾಡಿದ ನಂತರ ಯೋಗೇಶ್‌ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಚಹಾಗೆ ಇಲಿ ಪಾಷಾಣ ಬೆರೆಸಿ ಮಗಳಿಗೆ ಕುಡಿಸಿ ಚಂದ್ರಿಕಾ ಕುಡಿದಿದ್ದಾಳೆ.

ಇಲಿ ಪಾಷಾಣ ಸೇವಿಸಿದ ಬಳಿಕ ಪತಿಗೆ ಕರೆ ಮಾಡಿ ಚಂದ್ರಿಕಾ ವಿಷಯ ತಿಳಿಸಿದ್ದಾಳೆ. ಕೂಡಲೇ ಮನೆ ಬಳಿ ಬಂದು ಮಗು ಮತ್ತು ಪತ್ನಿಯನ್ನ ಯೋಗೇಶ್‌ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ಫಲಕಾರಿಯಾಗದೇ ಚಾರ್ವಿ ಸಾವನ್ನಪ್ಪಿದರೆ, ಚಂದ್ರಿಕಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article