ಹಾಸನ: ತಂದೆ ಮಾಡಿದ್ದ ಸಾಲಕ್ಕೆ ಹಾಸನದ ಹೇಮಾವತಿ ನಾಲೆಗೆ ಹಾರಿ ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲೂಕು ದಿಂಡಗೂರು ಗ್ರಾಮದಲ್ಲಿ ನಡೆದಿದೆ.
ರಾಧಾ(31), ಕಾಂತಾರಾಜು(6), ಭರತ್(4) ಆತ್ಮಹತ್ಯೆ ಮಾಡಿಕೊಂಡವರು. ರಾಧಾ ತಂದೆ ದಾಸೇಗೌಡ ಅದೇ ಗ್ರಾಮದ ಪುಟ್ಟಸ್ವಾಮಿ ಅವರಿಂದ 1 ಲಕ್ಷ ರೂ. ಸಾಲ ಪಡೆದಿದ್ದನು. ಸಾಲ ಹಣಕ್ಕೆ ಜಮೀನು ಮಾರುವುದಾಗಿ ದಾಸೇಗೌಡ ಹೇಳಿದ್ದರು. ಆದರೆ ಸಾಲು ಪಡೆದಿದ್ದ ದಾಸೇಗೌಡ ಕಳೆದ 3 ತಿಂಗಳ ಹಿಂದೆ ಸಾವನ್ನಪ್ಪಿದ್ದ. ಸಾಲ ನೀಡಿದ್ದ ಪುಟ್ಟಸ್ವಾಮಿ ರಾಧಾ ಹಾಗೂ ಸಹೋದರರಿಗೆ ಕೋರ್ಟ್ ನೋಟಿಸ್ ನೀಡಿದ್ದರು. ಸಾಲಕ್ಕೆ ಜಮೀನು ಕೊಡಿ ಇಲ್ಲವಾದಲ್ಲಿ ಕಾನೂನು ಕ್ರಮ ಜರಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ನೋಟಿಸ್ ಗೆ ಹೆದರಿ ಕಳೆದ ರಾತ್ರಿ ರಾಧಾ ತನ್ನ ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಧಾ ಶವ ಪತ್ತೆಯಾಗಿದ್ದು, ಮಕ್ಕಳ ಶವಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧ ಕಾರ್ಯಚರಣೆ ನಡೆಯುತ್ತಿದೆ. ರಾಧಾ ದಡ್ಡಿ ಹಳ್ಳಿಯ ಸಂತೋಷ್‍ನೊಂದಿಗೆ ವಿವಾಹವಾಗಿದ್ದಳು.
ಈ ಘಟನೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv