ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಕಲಬುರಗಿ ಸಮೀಪ ಗಾಣಗಾಪುರ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೌದು, ಡಿಕೆಶಿ ಅವರ ಆಪ್ತ ಗುರೂಜಿ ಆಗಿರುವ ದ್ವಾರಕನಾಥ ಗುರೂಜಿ ಸಲಹೆಯ ಮೇರೆಗೆ ಕುಮಾರಸ್ವಾಮಿ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದ್ವಾರಕನಾಥ ಗುರೂಜಿ, ಇವತ್ತು ಕನ್ಯಾ ಸಂಕ್ರಮಣ. ಇದು ಅತ್ಯಂತ ಶೇಷ್ಠವಾದ ದಿವಸ. ಮುಂದಿನ 15 ದಿವಸ ದೇವರುಗಳಿಗೆ ಉಳಿದ 15 ದಿವಸ ಪಿತೃ ದೇವರುಗಳಿಗೆ ಇರುವುದು. ನಾನು ಯಾರ ಪರವಾಗಿಯೂ ಇಲ್ಲ. ನಾವು ಕೂಡ ಈ ರಾಷ್ಟ್ರದ ಪ್ರಜೆಗಳು. ನಮ್ಮದು ಒಂದು ಕೊಡುಗೆ ಇರಬೇಕು. ರಾಜ್ಯವನ್ನು ರಾಷ್ಟ್ರವನ್ನು ಆಳುವುದಕ್ಕಾಗಿ ಅವತ್ತಿನ ದಿನದಲ್ಲಿ ಶ್ರೀ ಪಾದ ಶ್ರೀ ದತ್ತಾತ್ರೇಯ ಕ್ಷೇತ್ರ ಗಾಣಗಾಪುರಕ್ಕೆ ಹೋಗಿ ದೇವರನ್ನು ಕೇಳಿಕೊಂಡು ಬರಲಿ ಎಂದು ಕುಮಾರಸ್ವಾಮಿ ಅವರಿಗೆ ಒಳ್ಳೆದು ಮಾಡುತ್ತಾರೆ ಅಂತ ಹೇಳಿದ್ದೆ. ಕಾಲಜ್ಞಾನದಲ್ಲಿ ಈ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದು ಅಸಂಭವನೀಯ ಎಂದರು. ಇದನ್ನು ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?
ಈಗಾಗಲೇ ಸದ್ಯಕ್ಕೆ ಸಿಎಂ ಕುಮಾರಸ್ವಾಮಿ ಬದಲಾವಣೆ ಸಾಧ್ಯವಿಲ್ಲ. ಅಕ್ಟೋಬರ್ 11 ರವರೆಗೆ ಕುಮಾರಸ್ವಾಮಿಗೆ ಗುರುಬಲ ಚೆನ್ನಾಗಿದೆ. ರವಿ ಬುಧ ಪ್ರವೇಶವಾಗಿದೆ. ರವಿ ಬುಧ ಒಂದೇ ಮನೆಯಲ್ಲಿದ್ದಾರೆ. ಈಗ ರವಿಯದ್ದು ಆದಿತ್ಯ ಬುಧಯೋಗ. ಈ ರೀತಿ ಇದ್ದಾಗ ರಾಜನನ್ನು ಕದಡಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.
ಈ ಹಿಂದೆ ಧರ್ಮಸ್ಥಳ ದೇವಾಲಯಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅರ್ಧಗಂಟೆಯ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಆಗ ಕೂಡ ವಾತಾವರಣ ಚೆನ್ನಾಗಿರಲಿಲ್ಲ. ಆಗಲೇ ನಾನು ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ಆದರೆ ಮೋದಿ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಪಡೆದು ದೇವರ ಸ್ವರೂಪಿಯಾದ ವೀರೇಂದ್ರ ಹೆಗಡೆಯವರ ಆರ್ಶೀವಾದ ಪಡೆದರೋ ಎಲ್ಲಾ ಕಡೆ ಗೆಲ್ತಾರೆ ಎಂದು ಹೇಳಿದ್ದೆ. ಹಾಗೆಯೇ ಉತ್ತರ ಭಾರತದ ಎಲ್ಲ ಕಡೆ ಗೆದ್ದಿದ್ದಾರೆ. ಮಹಾ ಪುಣ್ಯಕಾಲ ಇಂತ ಯೋಗದಲ್ಲಿ ದೇವರ ದರ್ಶನ ಮಾಡಿದರೆ ಭಂಗವಂತ ಖಂಡಿತವಾಗಿಯೂ ಕಾಪಾಡುತ್ತಾನೆ ಎಂದರು. ಇದನ್ನು ಓದಿ: ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಡಿಯೂರಪ್ಪನವರು ಆತುರ ಮಾಡಬಾರದು. ಯಡಿಯೂರಪ್ಪ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಜಾಸ್ತಿ ಆತುರ ಇದೆ. ಡಿಕೆಶಿಗೆ ಎದುರಾಗಿರುವ ಸಂಕಷ್ಟ ಬಗೆಹರಿಯಲು ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಲು ಹೇಳಿದ್ದೆ. ಇದರಿಂದಾಗಿ ಡಿಕೆಶಿಗೆ ಒಂದೊಂದೆ ಸಮಸ್ಯೆ ಬಗೆಹರಿಯುತ್ತಾ ಇದೆ. ಡಿಕೆಶಿ ಮುಂದೊಂದು ದಿನ ಸಿಎಂ ಆಗ್ತಾರೆ ಎಂದು ಈ ವೇಳೆ ಭವಿಷ್ಯ ನುಡಿದರು.
ಹೈದ್ರಾಬಾದ್ ಕರ್ನಾಟಕದಲ್ಲಿ ಈ ಗಾಣಗಪುರ ಕ್ಷೇತ್ರ ಕಲಬುರಗಿಯಲ್ಲಿ ತುಂಬ ಹಿಂದುಳಿದ ಪ್ರದೇಶದಲ್ಲಿದೆ. ತಿಂಗಳುಗಟ್ಟಲೆ ಇಲ್ಲಿರುವ ಅಷ್ಟ ತೀರ್ಥಗಳಲ್ಲಿ ಸ್ನಾನಮಾಡುತ್ತಾರೆ. ಕುಡಿಯುವುದಕ್ಕೂ ನೀರಿಲ್ಲದೇ ಸರಿಯಾದ ವ್ಯವಸ್ಥೆ ಇಲ್ಲ ಎಂದು ಈ ವೇಳೆ ದ್ವಾರಕನಾಥ ಗುರೂಜಿ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv