ಚಿಕ್ಕಮಗಳೂರು: ರಾಜ್ಯ ಸರ್ಕಾರಕ್ಕೆ ದತ್ತಪೀಠದ (Datta Peetha) ಪೂಜಾ ಪದ್ಧತಿ ವಿಚಾರವಾಗಿ ಸುಪ್ರೀಂ ಕೋರ್ಟ್ (Supreme Court ) ಸೂಚನೆಯಂತೆ ಸರ್ಕಾರ ರಚಿಸಿರುವ ಕ್ಯಾಬಿನೆಟ್ ಸಬ್ ಕಮಿಟಿ ದತ್ತಪೀಠದ ವಾದ-ವಿವಾದದ ಬಗ್ಗೆ ಸಭೆ ನಡೆಸಿದೆ.
ಜ.7 ರಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ದತ್ತಪೀಠದ ಪೂಜಾ ಪದ್ಧತಿ ಹಾಗೂ ಸಂವರ್ಧನಾ ಸಮಿತಿ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆ ಹಾಕಿ ಎರಡು ತಿಂಗಳ ಒಳಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ದತ್ತಪೀಠದ ವಿವಾದ ಕುರಿತು ಸರ್ಕಾರ ನೇಮಿಸಿದ ಕಮಿಟಿ ಸಭೆ ನಡೆಸಿದೆ. ಸಭೆಯಲ್ಲಿ ಗೃಹಸಚಿವ ಪರಮೇಶ್ವರ್, ಜಮೀರ್ ಅಹಮದ್, ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ ಸೇರಿ ಏಳು ಜನ ಸಚಿವರಿದ್ದು, ಹಿಂದೂ ಸಂಘಟನೆ ಮುಖಂಡರು ಹಾಗೂ ಶಾಖಾದ್ರಿ ಕುಟುಂಬದ ಜೊತೆ ಸಭೆ ನಡೆಸಿದ್ದಾರೆ. ಇದೇ ಮಾರ್ಚ್ 24ರಂದು ಸುಪ್ರೀಂ ಕೋರ್ಟಿನಲ್ಲಿ ಈ ಸಂಬಂಧ ವಿಚಾರಣೆ ನಡೆಯಲಿದೆ.
Advertisement
ಹಿಂದೂ ಸಂಘಟನೆಗಳ ಪರವಾಗಿ ವಿಶ್ವ ಹಿಂದೂ ಪರಿಷದ್, ಭಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು. ಮುಸ್ಲಿಮರ ಪರವಾಗಿ ಶಾಖಾದ್ರಿ ಕುಟುಂಬಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ವರದಿಯನ್ನು ಸುಪ್ರೀಂ ಕೋರ್ಟ್‍ಗೆ ತಲುಪಿಸಲಿದೆ. ಸಭೆಯ ಬಳಿಕ ದತ್ತಪೀಠದ ಪೂಜಾ ಪದ್ಧತಿ ಹಾಗೂ ದತ್ತಪೀಠ ಆಡಳಿತದ ಸಂವರ್ದನಾ ಸಮಿತಿ ಬಗ್ಗೆ ರಾಜ್ಯ ಸರ್ಕಾರದ ನಿಲುವು ಈಗ ನಿಗೂಢವಾಗಿದೆ.
Advertisement
Advertisement
ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಉಮೇದುವಾರಿಕೆಗಾಗಿ ಕಳೆದ ಮೂರು ದಶಗಳಿಂದ ಹಿಂದೂ-ಮುಸ್ಲಿಮರು ನ್ಯಾಯಾಲಯದ ಹೊರಗೆ-ಒಳಗೆ ಹೋರಾಡುತ್ತಲೇ ಇದ್ದಾರೆ. ಹಿಂದೂಗಳು ಇದು ದತ್ತಪೀಠ, ನಿಮ್ಮ ದರ್ಗಾ ನಾಗೇಹಳ್ಳಿಯಲ್ಲಿದೆ ಎನ್ನುತ್ತಿದ್ದಾರೆ. ಮುಸ್ಲಿಮರು ಇದು ಬಾಬಾಬುಡನ್ ದರ್ಗಾ ನಮ್ಮದೇ ಎನ್ನುತ್ತಿದ್ದಾರೆ.
Advertisement
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ (ದತ್ತಪೀಠದ) ದ ಆಡಳಿತಕ್ಕಾಗಿ ಹೈಕೋರ್ಟ್ ಆದೇಶದ ಅನ್ವಯ ದತ್ತಪೀಠ ಸಂವರ್ದನಾ ಸಮಿತಿಯನ್ನ ನೇಮಿಸಿತ್ತು. ಅದರಂತೆ ಇಂದಿಗೂ ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ದತ್ತಪೀಠದ ದತ್ತಾತ್ರೇಯರಿಗೆ ಪೂಜೆ ನಡೆಯುತ್ತಿದೆ. ಕಳೆದೊಂದು ವರ್ಷದ ಹಿಂದೆ ಶಾಖಾದ್ರಿ ಕುಟುಂಬದ ಫಕ್ರುದ್ಧಿನ್ ಶಾ ಖಾದ್ರಿ ದತ್ತಪೀಠದ ಪೂಜಾ ಪದ್ಧತಿ ಹಾಗೂ ಬಿಜೆಪಿ ಸರ್ಕಾರ ನೇಮಿಸಿದ್ದ ದತ್ತಪೀಠ ಸಂವರ್ದನಾ ಸಮಿತಿ ವಿರುದ್ಧ ರದ್ದು ಮಾಡುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಶಾಖಾದ್ರಿ ಅವರ ಅರ್ಜಿಯನ್ನ ವಜಾಗೊಳಿಸಿತ್ತು. ಹಾಗಾಗಿ, ಫ್ರಕ್ರುದ್ಧಿನ್ ಶಾಖಾದ್ರಿ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದರು. ಮೂರು ದಶಕಗಳಿಂದ ದತ್ತಪೀಠದ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ.