ಚಿಕ್ಕಮಗಳೂರು: ಕಾಫಿನಾಡಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ ನಡೆದಿದ್ದು, ದರ್ಶನಕ್ಕೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಮೊಳೆಗಳನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಇಂದಿನಿಂದ ದತ್ತ ಜಯಂತಿಗೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಮೊದಲ ದಿನವಾದ ಇಂದು ಅನುಸೂಯ ಜಯಂತಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ (Datta Peeta) ತೆರಳಿ ಅನುಸೂಯ ದೇವಿಯ ದರ್ಶನವನ್ನು ಮಹಿಳೆಯರು ಪಡೆಯಲು ಸಿದ್ಧರಾಗಿದ್ದರು. ಈ ವೇಳೆ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿರುವ ಕೈಮಾರ ಚೆಕ್ ಪೋಸ್ಟ್‍ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಹಾಕಿರುವುದು ಕಂಡುಬಂದಿದೆ.
Advertisement
Advertisement
ಘಟನೆಗೆ ಸಂಬಂಧಿಸಿ ಸ್ಥಳೀಯರು ಈ ಸಂಚನ್ನು ದೇವಿಯ ದರ್ಶನಕ್ಕೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ದತ್ತ ಪೀಠಕ್ಕೆ ತೆರುಳವವರಿಗೆ ಅಪಘಾತ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಬಡ್ಡಿ ಅಂಗಳಕ್ಕಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು
Advertisement
Advertisement
ದತ್ತಪೀಠಕ್ಕೆ ತೆರಳುವ ವಾಹನಗಳಿಗೆ ಕಿಡಿಗೇಡಿಗಳಿಂದ ಅಡ್ಡಿ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಪ್ರತಿಕ್ರಿಯಿಸಿ, ನನಗೆ ಮಾಹಿತಿ ಸಿಕ್ಕಿದೆ. ಎಸ್ಪಿ, ಡಿಸಿ ಬಳಿ ಈ ಬಗ್ಗೆ ಮಾತನಾಡಿದ್ದೇನೆ. ಕೆಲವರು ಶಾಂತಿಗೆ ಭಂಗ ತರುವ ಕೆಲಸ ಮಾಡಿದ್ದಾರೆ. ದಾರಿಯುದ್ದಕ್ಕೂ ಮೊಳೆಗಳನ್ನ ಚೆಲ್ಲುವ ಹುನ್ನಾರ ಮಾಡಿದ್ದಾರೆ. ಜಿಲ್ಲಾಡಳಿತ ಅದನ್ನ ತೆರವುಗೊಳಿಸುವ ಕೆಲಸ ಮಾಡುತ್ತಿದೆ. ಕಿಡಿಗೇಡಿಗಳ ಈ ಬೆದರಿಕೆಗೆ ಜಗ್ಗಲ್ಲ, ಈ ಎಲ್ಲಾ ಅಡೆತಡೆಗಳನ್ನು ಮೀರಿ ದತ್ತಜಯಂತಿ ಚೆನ್ನಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ