ಚಿಕ್ಕಮಗಳೂರು: ತಾಲೂಕಿನ (Chikkamagaluru) ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ (Datta Peeta) ಕಳೆದ 9 ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ (Datta Jayanti) ಶಾಂತಿಯುತ ತೆರೆಬಿದ್ದಿದೆ.
ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾಗಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ 15 ಸಾವಿರ ದತ್ತಭಕ್ತರು ಪಾದುಕೆ ದರ್ಶನ ಪಡೆದರು.
Advertisement
Advertisement
ಭಕ್ತರು ಪಾದುಕೆ ದರ್ಶನಕ್ಕೆ ಬರುವ ವೇಳೆ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕು. ಗೋರಿಗಳನ್ನ ಸ್ಥಳಾಂತರಿಸಬೇಕು ಎಂಬ ಆಕ್ರೋಶದ ಘೋಷಣೆ ಕೂಗಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ಶ್ರೀರಾಮಸೇನೆ, ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ನಾಯಕರು ಒಟ್ಟಿಗೆ ಸೇರಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
Advertisement
Advertisement
ದತ್ತಾತ್ರೇಯರ ಗುಹೆ ಸಮೀಪದಲ್ಲಿಯೇ ಹೋಮ-ಹವನ ನಡೆದಿದೆ. ಇನ್ನೂ ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬಂದು ದತ್ತಪಾದುಕೆ ದರ್ಶನ ಮಾಡಿದ್ದಾರೆ. ಈ ಮೂಲಕ ಕಳೆದ 9 ದಿನಗಳಿಂದ ವ್ರತ ಆಚರಣೆಯೊಂದಿಗೆ ನಡೆದ ದತ್ತಜಯಂತಿ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಮಳೆ-ಮಂಜು ಆತಂಕವಿದ್ದರೂ ನಿರೀಕ್ಷೆಗೂ ಮೀರಿಯೇ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆದಿದ್ದಾರೆ.
ಮಾಜಿ ಸಚಿವ ಸಿ.ಟಿ.ರವಿ ಹೊನ್ನಮ್ಮ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದರು.