– ಅನುಮಾನ ಬಾರದಂತೆ ಪ್ಯಾಕ್ ಮಾಡುತ್ತಿದ್ದ ಆರೋಪಿಗಳು
ಕೋಲ್ಕತ್ತಾ: ಅಂತರಾಷ್ಟ್ರೀಯ ಡ್ರಗ್ಸ್ ಸಾಗಾಣಿಕೆ ದಂಧೆಯನ್ನು ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಜಾಕೀರ್ ಹುಸೇನ್ ಹಾಗೂ ಈತನ ಸಹಚರರಾದ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸ್ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 85 ಲಕ್ಷ ರೂ. ಬೆಲೆಯ 10 ಕೆ.ಜಿ. ಚರಸ್ ವಶಕ್ಕೆ ಪಡೆದಿದ್ದಾರೆ.
Advertisement
ಡ್ರಗ್ಸ್ ಸಾಗಿಸಲು ಆರೋಪಿಗಳು ಖರ್ಜೂರದ ಚಿತ್ರವಿರುವ ಬಾಕ್ಸ್ ಹಾಗೂ ಕವರ್ ಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮೊದಲು ಜಾಕೀರ್ ಹುಸೇನ್‍ನನ್ನು ಪೊಲೀಸರು ಬಂಧಿಸಿದ್ದು, ಜಾಕೀರ್ ಹುಸೇನ್ ಸಹಾಯದಿಂದ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.
Advertisement
Advertisement
ವಿಚಾರಣೆ ವೇಳೆ ಹುಸೇನ್‍ನಿಂದ ಪೊಲೀಸರು ಪ್ರಮುಖ ಮಾಹಿತಿಯನ್ನು ಕಲೆ ಹಾಕಿದ್ದು, ಈ ವೇಳೆ ನಗರದ ಬೆಹಲಾದ ಅಪಾರ್ಟ್ ಮೆಂಟಿನಲ್ಲಿ ದಂಧೆ ನಡೆಸಲಾಗುತ್ತಿದೆ ಎಂದು ಜಾಕೀರ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೊಲೀಸರು ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಆರೋಪಿಗಳು ಡ್ರಗ್ಸ್ ಸಾಗಿಸಲು ಖರ್ಜೂರದ ಪ್ಯಾಕೆಟನ್ನು ಬಳಸುತ್ತಿದ್ದರು. ಯಾರಿಗೂ ತಿಳಿಯದ ಹಾಗೆ ಇವುಗಳನ್ನು ಪ್ಯಾಕ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಪ್ಯಾಕೆಟ್ ಹಾಗೂ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಯಾರಿಗೂ ಅನುಮಾನ ಬಾರದಂತೆ ವಿದೇಶಕ್ಕೆ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಪ್ಯಾಕ್ ಮಾಡಿದ ಡ್ರಗ್ಸನ್ನು ಚೀನಾಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.