ಡ್ರೈ ಫ್ರೂಟ್ಸ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಡ್ರೈ ಫ್ರೂಡ್ಸ್ ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಖರ್ಜೂರ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ. ಇದನ್ನು ಪ್ರತಿನಿತ್ಯ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.
ಉತ್ತಮ ಆರೋಗ್ಯ: ಅಧಿಕ ಪ್ರಮಾಣದ ಪೌಷ್ಟಿಕಾಂಶಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಅಂಶಗಳು ದೇಹದ ಮಾಂಸಖಂಡ ಹಾಗೂ ಮೂಳೆಗಳ ಅಭಿವೃದ್ಧಿಗೂ ಸಹಾಯ ಮಾಡುತ್ತವೆ. ದೇಹದಲ್ಲಿ ಪ್ರೋಟೀನ್ ಕೊರತೆ ಆಗದಂತೆ ನೋಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ನಿರ್ವಹಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
Advertisement
Advertisement
ಜೀರ್ಣಕ್ರಿಯೆ ವೃದ್ಧಿ: ಖರ್ಜೂರದಲ್ಲಿ ಅತಿಯಾದ ನಾರಿನ ಅಂಶಳಿರುತ್ತದೆ. ಇದರಿಂದಾಗಿ ದೇಹದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಜೊತೆಗೆ ಕರುಳಿನ ಕಾರ್ಯವನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
Advertisement
ಅಧಿಕ ರಕ್ತದ ಒತ್ತಡ ನಿಯಂತ್ರಣ: ಪ್ರತಿನಿತ್ಯ ಒಂದರಿಂದ ಎರಡು ಖರ್ಜೂರವನ್ನು ಸೇವಿಸುವುದರಿಂದ ಅಧಿಕ ರಕ್ತದ ಒತ್ತಡವನ್ನು ತಡೆಯುತ್ತದೆ. ಇದರಿಂದಾಗಿ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರವಹಿಸುತ್ತದೆ.
Advertisement
ರಕ್ತಹೀನತೆ ನಿವಾರಣೆ: ರಕ್ತ ಹೀನತೆ ಸಮಸ್ಯೆ ಇದ್ದವರು ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡಿ ದೇಹದ ಎಲ್ಲಾ ಭಾಗಗಳಿಗೂ ಆಮ್ಲಜನಕವನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಕೆಲಸವನ್ನು ಮಾಡುತ್ತದೆ.
ಶಕ್ತಿ ಹೆಚ್ಚಳ: ಅಶಕ್ತತೆ ಇದ್ದವರಿಗೆ ಖರ್ಜೂರ ಒಳ್ಳೆಯ ಮದ್ದಾಗಿದೆ. ಇದರಲ್ಲಿ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಅನೇಕ ಪೋಷಕಾಂಶಗನ್ನು ಒಳಗೊಂಡಿದೆ. ಇದು ಸುಕ್ರೋಸ್, ಫ್ರಕ್ಟೋಸ್, ಮತ್ತು ಗ್ಲೂಕೋಸ್‍ನಂತಹ ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ.
ಲೈಂಗಿಕ ಆರೋಗ್ಯ ವೃದ್ಧಿ: ಲೈಂಗಿಕ ಶಕ್ತಿಯನ್ನು ಪ್ರಚೋದಿಸುವ ಹಾರ್ಮೋನ್‍ಗಳು ಖರ್ಜೂರ ಸೇವನೆ ಮಾಡುವುದರಿಂದ ಉದ್ದೀಪನಗೊಳ್ಳುತ್ತದೆ. ನಿತ್ಯ ಬೆಳಗ್ಗೆ ಒಂದು ಲೋಟ ಬಿಸಿ ಹಾಲಿನ ಜೊತೆಗೆ ನೆನೆಸಿ ಸೇವಿಸಿದರೆ ಒಂದೆರಡು ತಿಂಗಳಲ್ಲಿಯೇ ಲೈಂಗಿಕ ಸಮಸ್ಯೆಗಳಲ್ಲಿ ಪರಿಹಾರ ಕಾಣಬಹುದು. ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ
ದೇಹದ ತೂಕ ಹೆಚ್ಚಳ: ಖರ್ಜೂರಗಳಲ್ಲಿ ಕಂಡುಬರುವ ಕ್ಯಾಲೊರಿ ಅಂಶಗಳು ಹಾಲಿನೊಂದಿಗೆ ಮಿಶ್ರಣ ಆಗುತ್ತದೆ. ಇದರಿಂದಾಗಿ ಸಹಜವಾಗಿ ದೇಹದ ತೂಕ ಹೆಚ್ಚಾಗುತ್ತದೆ.ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ