Bengaluru CityDistrictsKarnatakaLatestLeading NewsMain Post

ಇಂದೇ ರಕ್ತ ಚಂದ್ರಗ್ರಹಣ – ಯಾವ ನಕ್ಷತ್ರ, ರಾಶಿಗಳಿಗೆ ದೋಷ?

ಬೆಂಗಳೂರು: ಇಂದು ಮಂಗಳವಾರ ರಾಹುಗ್ರಸ್ತ ಚಂದ್ರಗ್ರಹಣ (Lunar Eclipe) ದ ಕಾರ್ಮೋಡ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಕ್ಕೆ ಭಾರತ ಸಾಕ್ಷಿಯಾಗಲಿದ್ದು, ಕರುನಾಡಿನಲ್ಲಿಯೂ ಪಾರ್ಶ್ವ ಚಂದ್ರಗ್ರಹಣದ ಛಾಯೆ ಗೋಚರಿಸಲಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೂರ್ಯಗ್ರಹಣ (Solar Eclipse) ಸಂಭವಿಸಿತ್ತು. ಇದೀಗ 15 ದಿನದ ಅಂತರದಲ್ಲಿಯೇ ಕಾರ್ತಿಕ ಪೂರ್ಣಿಮೆಯ ದಿನ ರಾಹುಗ್ರಸ್ಥ ಚಂದ್ರಗ್ರಹಣ ಸಂಭವಿಸಲಿದೆ. 15 ದಿನದ ಅಂತರದಲ್ಲಿ ಎರಡು ಗ್ರಹಣ ಸಂಭವಿಸಿರೋದ್ರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಹಜವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಭರಣಿ ನಕ್ಷತ್ರ ಮೇಷರಾಶಿಯಲ್ಲಿ ಸಂಭವಿಸಲಿರುವ ಗ್ರಹಣದಿಂದ ಕೆಲ ರಾಶಿಯವರಿಗೆ ಅಪತ್ತು ಕೆಲ ರಾಶಿಯವರಿಗೆ ಉತ್ತಮವೂ ಆಗಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿದೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ

ರಾಹುಗ್ರಸ್ಥ ಚಂದ್ರ ಗ್ರಹಣದ ಅವಧಿ ಹೀಗಿದೆ:
> ಗ್ರಹಣ ಸ್ಪರ್ಶಕಾಲ – 2.39ಕ್ಕೆ
> ಗ್ರಹಣ ಮಧ್ಯಕಾಲ – 4.29ಕ್ಕೆ
> ಗ್ರಹಣ ಮೋಕ್ಷಕಾಲ – 6.19ಕ್ಕೆ

ಗ್ರಹಣ ದೋಷವಿರುವ ನಕ್ಷತ್ರ, ರಾಶಿಗಳು:
ನಕ್ಷತ್ರಗಳು – ಅಶ್ವಿನಿ, ಭರಣಿ, ಕೃತ್ತಿಕಾ, ಪೂರ್ವೆ(ಹುಬ್ಬಾ), ಪೂರ್ವಷಾಢಾ
ರಾಶಿಗಳು – ಮೇಷ, ವೃಷಭ, ಕನ್ಯಾ, ವೃಶ್ಚಿಕ

ಗ್ರಹಣಾಚರಣೆ ಯಾವ ಕ್ರಮ ಅನುಸರಿಸಬೇಕು..?
– ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ ಮಾಡುವುದು
– ದೇವರ ಸ್ತೋತ್ರ ಪಠಣೆ
– ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಜಪ
– ಗ್ರಹಣ ಅವಧಿಯಲ್ಲಿ ಮನೆಯಿಂದ ಹೊರಬಾರದೇ ಇರುವುದು
– ಗ್ರಹಣ ಮೋಕ್ಷದ ನಂತರ ಸ್ನಾನ ಮಾಡುವುದು
– ಗ್ರಹಣ ದೋಷವಿರುವ ನಕ್ಷತ್ರ, ರಾಶಿಯವರು ಹೋಮ ಮಾಡಿಸಿ
– ದೋಷ ಪರಿಹಾರಕ್ಕೆ ಗ್ರಹಣ ಶಾಂತಿಹೋಮ ನಡೆಸಿದ್ರೆ ಉತ್ತಮ

15 ದಿನಗಳ ಅಂತರದಲ್ಲಿ ಗ್ರಹಣ ಸಂಭವಿಸಿರೋದ್ರಿಂದ ಪ್ರಕೃತಿಯಲ್ಲಿ ಕೊಂಚ ಅಲ್ಲೋಲ ಕಲ್ಲೋಲವಾಗಬಹುದು ಎನ್ನುವ ವಿಶ್ಲೇಷಣೆಯನ್ನು ಜ್ಯೋತಿಷಿಗಳು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ರಕ್ತಚಂದ್ರಗ್ರಹಣ ಧಾರ್ಮಿಕವಾಗಿ ಮಹತ್ವ ಪಡೆದುಕೊಂಡಿದೆ.

Live Tv

Leave a Reply

Your email address will not be published. Required fields are marked *

Back to top button