ಬೆಂಗಳೂರು: 2 ವರ್ಷಗಳಿಗೊಮ್ಮೆ ನಡೆಯುವ ಭಾರತದ ಏರ್ ಶೋ (Air Show) `ಏರೋ ಇಂಡಿಯಾ- 2023′ (Aero India-2023) ಮುಂದಿನ ವರ್ಷ ಫೆಬ್ರವರಿ 13 ರಿಂದ 17ರ ವರೆಗೆ ಬೆಂಗಳೂರಿನ (Bengaluru) ಯಲಹಂಕಾದಲ್ಲಿ (Yalahanka) ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
Advertisement
ಈ ಬಗ್ಗೆ ರಕ್ಷಣಾ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದ್ದು, ಏಷ್ಯಾದಲ್ಲೇ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ- 2023 ಘೋಷಣೆಯಾಗಿದೆ. ಫೆಬ್ರವರಿ 13-17ರ ವರೆಗಿನ ದಿನಾಂಕವನ್ನು ಗುರುತು ಮಾಡಿಕೊಳ್ಳಿ. 2023ರ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಅಡಿಕೆ ಬೆಳೆಗಾರರ ಜೊತೆ ಸರ್ಕಾರ ಇದೆ : ಬೊಮ್ಮಾಯಿ
Advertisement
Asia’s Biggest Air Show #????????????????????????????????????????????????????
announced
???????????????? ???????????? ???????????????????? ~ ????????????????-???????????????? ???????????????????????????????? ????????????????
The biennial airshow will be held at Air Force Station, Yelahanka, Bengaluru, Karnataka
For more details: https://t.co/exUcJ7HjDp pic.twitter.com/5EvqS3y3Gh
— Defence Production India (@DefProdnIndia) November 27, 2022
Advertisement
ಇದು ಏರೋ ಇಂಡಿಯಾದ 14ನೇ ಆವೃತ್ತಿಯಾಗಲಿದೆ. ಹಿಂದಿನ ವರ್ಷದಂತೆ, ರಕ್ಷಣಾ ಸಚಿವಾಲಯ ವೈಮಾನಿಕ ಪ್ರದರ್ಶನದ ದಿನಾಂಕಗಳನ್ನು ಮುಂಚಿತವಾಗಿ ಘೋಷಿಸಿದೆ. ಆದರೆ ಪ್ರದರ್ಶನದಲ್ಲಿ ಭಾಗವಹಿಸಲಿರುವ ದೇಶಗಳು ಹಾಗೂ ಪ್ರದರ್ಶಕರ ಬಗ್ಗೆ ಯಾವುದೇ ರೀತಿಯ ಉಲ್ಲೇಖಗಳನ್ನು ಮಾಡಲಾಗಿಲ್ಲ. ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ವಿವಿಧ ಸಮಿತಿಗಳು ಪ್ರಕಟ