ಬೆಂಗಳೂರು: ಸರ್ಕಾರದ ವತಿಯಿಂದ ಮುಜರಾಯಿ ಇಲಾಖೆ ಅಧೀನದಲ್ಲಿ ನಡೆಯುವ ಸಾಮೂಹಿಕ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 26 ರಂದು ಮೊದಲ ಹಂತದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ರಾಜ್ಯ ಮುಜರಾಯಿ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಇಂದು ವಿಧಾನಸೌಧದಲ್ಲಿ ಮಾತನಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಕಾರ್ಯಕ್ರಮಕ್ಕೆ ಪ್ರಚಾರ ನೀಡಲು 10 ದೇವಾಲಯಗಳಿಂದ ಪ್ರಚಾರ ರಥಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಮಾಹಿತಿ ನೀಡಲು ಟೋಲ್ ಫ್ರೀ ದೂರವಾಣಿ 18002456654 ಮೂಲಕವೂ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ
Advertisement
Advertisement
ಎಲ್ಲಾ ಜಿಲ್ಲೆಗಳ ಎ ದರ್ಜೆಯ ದೇವಸ್ಥಾನಗಳಲ್ಲಿ ಏಪ್ರಿಲ್ 26 ರಂದು ಸಾಮೂಹಿಕ ಮದುವೆ ನಡೆಯಲಿದೆ. ಕೆಲವು ಜಿಲ್ಲೆಗಳಲ್ಲಿ ಎ ದರ್ಜೆ ದೇವಾಲಯಗಳಿಲ್ಲ. ಗದಗ, ಹಾವೇರಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಎ ದರ್ಜೆ ದೇವಾಲಯಗಳಿಲ್ಲ. ಆ ಜಿಲ್ಲೆಗಳಲ್ಲಿ ಬಿ ಮತ್ತು ಸಿ ದರ್ಜೆ ದೇವಾಲಯಗಳಲ್ಲೇ ಸಾಮೂಹಿಕ ವಿವಾಹ ಆಯೋಜಿಸಲು ಸೂಚನೆ ನೀಡಲಾಗಿದೆ.
Advertisement
ಕಂದಾಯ ಇಲಾಖೆಯಲ್ಲಿ ಆದರ್ಶ ವಿವಾಹ ಎಂಬ ಯೋಜನೆ ಇದೆ. ವಧುವಿನ ಹೆಸರಲ್ಲಿ 10,000ರೂ ಬಾಂಡ್ ವಿತರಿಸಲಾಗುತ್ತದೆ. ಈ ಯೋಜನೆಯನ್ನೂ ಸಹ ಸಪ್ತಪದಿ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಆ ಯೋಜನೆಯಡಿ 2 ಕೋಟಿ ರೂ. ಬಳಕೆಯಾಗದೆ ಹಾಗೆ ಇದೆ. ಇದರಲ್ಲಿ 2000 ವಧುಗಳಿಗೆ ಬಾಂಡ್ ಕೊಡಬಹುದು. ಜೊತೆಗೆ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಎಸ್‍ಸಿಎಸ್‍ಟಿ ದಂಪತಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50,000ರೂ ಪ್ರೋತ್ಸಾಹ ಧನ ನಗದು ಹಣವನ್ನು ಹಂಚಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಸಪ್ತಪದಿ’ ಸಾಮೂಹಿಕ ವಿವಾಹ ಲಾಂಛನ ಬಿಡುಗಡೆ – ಏ.26, ಮೇ24ಕ್ಕೆ ಡೇಟ್ ಫಿಕ್ಸ್