– ಕೆಎಸ್ಆರ್‌ಟಿಸಿ ಸಹವಾಸಾನೆ ಬೇಡ ಎಂದ ಜನ
ಕೊಪ್ಪಳ: ರಾಜಾಧಾನಿಯಲ್ಲಿ ಡೇಟ್ ಬಾರ್ ಆದ ಬಸ್‍ಗಳನ್ನೆಲ್ಲಾ ತಂದು ಹೈದರಾಬಾದ್ ಕರ್ನಾಟಕದಲ್ಲಿ ಓಡಿಸುತ್ತಾರೆ. ಹೀಗೆ ಓಡಿಸುವ ಬಸ್‍ಗಳು ಅವ್ಯಸ್ಥೆ ನೋಡಿದರೆ ಜನರು ಇನ್ನೊಂದ ಸಲ ಕೆಎಸ್ಆರ್‌ಟಿಸಿ ಸಹವಾಸಾನೆ ಬೇಡ ಎಂದು ಹೇಳುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕೆಎಸ್ಆರ್‌ಟಿಸಿ ಬಸ್ ಡಿಪೋದ ವ್ಯಥೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಪ್ರತಿನಿತ್ಯ ರಾಜಾಧಾನಿ ಬೆಂಗಳೂರಿಗೆ ತೆರಳುವ ಕೋರ್ನ್ ಎಂಬ ಹೆಸರಿನ ಸ್ಲೀಪಿಂಗ್ ಕೋಚ್ ಬಸ್. ಇದು ಹೆಸರಿಗೆ ಮಾತ್ರ ಸ್ಲೀಪಿಂಗ್ ಕೋಚ್ ಆಗಿದೆ. ಆದರೆ ಇದರ ಒಳಗಡೆ ಹೋದರೆ ಅಸಲಿಯತ್ತು ಗೊತ್ತಾಗುತ್ತೆ.
Advertisement
Advertisement
ಸುರಕ್ಷಿತ ಮತ್ತು ಆರಾಮಾದಾಯಕ ಪ್ರಯಾಣಕ್ಕೆ ಅಂತಾ ಇಂತಹ ಬಸ್‍ಗಳನ್ನು ಪ್ರಯಾಣಿಕರು ಹೆಚ್ಚಿನ ದರ ನೀಡಿ ಅಡ್ವಾನ್ಸ್ ಬುಕ್ ಮಾಡಿಕೊಳ್ಳುತ್ತಾರೆ. ಆದರೆ ಕೆಎಸ್ಆರ್‌ಟಿಸಿ ಬೇಜವಾಬ್ದಾರಿತನದಿಂದ ಡಕೋಟಾ ಬಸ್ ಆಗಿದೆ. ಮುಖ್ಯವಾಗಿ ಬಸ್ ಮುಂದೆ ಇರುವ ಗಾಜಿನ ವೈಫರ್ ಕೆಲಸ ಮಾಡದೇ ವರ್ಷಗಳೇ ಕಳೆದಿವೆ. ಅದಕ್ಕೆ ಕೃತಕವಾಗಿ ಒಂದು ದಾರ ಕಟ್ಟಿ ಡ್ರೈವರ್ ಪ್ರತಿನಿತ್ಯ ಬಸ್ ಓಡಿಸುತ್ತಾರೆ.
Advertisement
Advertisement
ಮಳೆ ಬಂದರೆ ಒಳಗಡೆ ತುಂತುರು ಮಳೆಯ ಸಿಂಚನ ಆರಂಭವಾಗುತ್ತೆ. ಎಲ್ಲಾ ಸ್ಲೀಪಿಂಗ್ ಕೋಚ್‍ಗಳು ಸೋರೋದಕ್ಕೆ ಪ್ರಾರಂಭವಾಗುತ್ತದೆ. ಬಸ್ ಎಲ್ಲಿ ಆದರೂ ಪಂಚರ್ ಆದರೆ ಟೈರ್ ಚೇಂಜ್ ಮಾಡುವುದ್ದಕ್ಕೆ ಸಲಕರಣೆಗಳು ಇಲ್ಲ. ಈ ಬಸ್ ಬಗ್ಗೆ ಹೇಳುತ್ತಿದ್ದರೆ, ಇದು ಬಸ್ ನಾ ಅಥವಾ ಬಂಡಿ ನಾ ಎನ್ನುವ ಅನುಮಾನ ಶುರುವಾಗಿದೆ.
ಇಷ್ಟೆಲ್ಲಾ ಬಸ್ ಅವ್ಯವಸ್ಥೆ ಇದ್ದರೂ ಸಂಬಂಧಪಟ್ಟ ಕೆಎಸ್ಆರ್‌ಟಿಸಿ ಡಿಪೋ ಒಂಚಿತ್ತೂ ಪ್ರಯಾಣಿಕರ ಗೋಳು ಕೇಳುವುದ್ದಕ್ಕೆ ಸಿದ್ಧರಿಲ್ಲ. ಡ್ರೈವರ್ ಅಂತೂ ಜೀವ ಕೈಯಲ್ಲಿ ಇಡಿದು ಪ್ರತಿ ನಿತ್ಯ ಬಸ್ ಓಡಿಸುತ್ತಾರೆ. ಈ ಬಗ್ಗೆ ಸ್ವಂತ ಆ ಬಸ್‍ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಮಾಧ್ಯಮದ ಮುಂದೆ ತಮಗಾದ ಅನುಭವವನ್ನು ಆಕ್ರೋಶದಿಂದ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv