ನವದೆಹಲಿ: ನಾವು ಸುಳ್ಳು ಹೇಳುತ್ತಿಲ್ಲ. ಈ ಹಿಂದೆ ನಾವು ಬಿಡುಗಡೆ ಮಾಡಿದ ಹೇಳಿಕೆಗಳು ಎಲ್ಲವೂ ಸತ್ಯವಾಗಿದೆ ಎಂದು ಡಸಾಲ್ಟ್ ಕಂಪನಿಯ ಸಿಇಒ ಎರಿಕ್ ಟ್ರಾಪ್ಪಿಯರ್ ಹೇಳಿದ್ದಾರೆ.
ರಫೇಲ್ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ ಅವರು ಎಲ್ಲ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಸುಳ್ಳು ಹೇಳುತ್ತಿಲ್ಲ. ನನಗೆ ಸುಳ್ಳು ಹೇಳುವ ಅಗತ್ಯವಿಲ್ಲ. ನಾನು ಸಿಇಒ ಆಗಿರುವಾಗ ಸುಳ್ಳು ಹೇಳಲೇಬಾರದು ಎಂದು ತಿಳಿಸಿದರು.
Advertisement
Advertisement
ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ಜೊತೆಗಿನ ಈ ಹಿಂದಿನ ಒಪ್ಪಂದವನ್ನು ವಿವರಿಸಿದ ಅವರು, ಕಾಂಗ್ರೆಸ್ ಪಕ್ಷದ ಜೊತೆ ನಮಗೆ ದೀರ್ಘ ಅನುಭವವಿದೆ. 1953 ರರಲ್ಲಿ ನೆಹರು ಪ್ರಧಾನಿಯಾಗಿದ್ದಾಗ ನಮ್ಮ ಜೊತೆ ಒಪ್ಪಂದ ನಡೆದಿತ್ತು. ನಾವು ಸರ್ಕಾರದ ಜೊತೆ ಮಾತ್ರ ವ್ಯವಹರಿಸುತ್ತೇವೆ ಹೊರತು ಪಕ್ಷದ ಜೊತೆ ಅಲ್ಲ ಎಂದರು.
Advertisement
ಎಚ್‍ಎಎಲ್ ಜೊತೆಗಿನ ವ್ಯವಹಾರ ರದ್ದಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ, ಭಾರತ ಸರ್ಕಾರ 126 ವಿಮಾನದ ಬದಲು ತುರ್ತಾಗಿ ಹಾರಲು ಸಿದ್ಧವಾಗಿರುವ 36 ವಿಮಾನ ಬೇಡಿಕೆಯನ್ನು ಇಟ್ಟಿತ್ತು. ಎಚ್‍ಎಎಲ್ ನಮ್ಮ ಜೊತೆ ಪಾಲುದಾರಿಕೆಯಾಗಲು ಹಿಂದೇಟು ಹಾಕಿತ್ತು. ಹೀಗಾಗಿ ನಾವು ರಿಲಯನ್ಸ್ ಕಂಪನಿ ಜೊತೆ ವ್ಯವಹಾರ ಮುಂದುವರಿಸಲು ತೀರ್ಮಾನಿಸಿದೆವು ಎಂದು ಉತ್ತರಿಸಿದರು.
Advertisement
ಈ ವೇಳೆ ಯಾವುದೇ ವಿಮಾನವನ್ನು ಉತ್ಪಾದಿಸಿದ ರಿಲಯನ್ಸ್ ಕಂಪನಿಯ ಜೊತೆ ನೀವು ವ್ಯವಹಾರ ನಡೆಸಲು ಒಪ್ಪಿದ್ದು ಹೇಗೆ ಎಂದು ಕೇಳಿದ್ದಕ್ಕೆ, ಈ ಯೋಜನೆಗೆ ಹೂಡಿಕೆ ಮಾಡಿದ ಹಣ ನೇರವಾಗಿ ರಿಲಯನ್ಸ್ ಕಂಪನಿಗೆ ಹೋಗುವುದಿಲ್ಲ. ರಿಲಯನ್ಸ್- ಡಸಾಲ್ಟ್ ಜಂಟಿ ಉದ್ಯಮವಾಗಿದ್ದು ಅವರು ರಫೇಲ್ ಜೆಟ್ ಖರೀದಿಯಲ್ಲಿ ನಮ್ಮ ಪಾಲುದಾರರು ಅಷ್ಟೇ. ಈಗಾಗಲೇ ನಾವು ಭಾರತದ 30ಕ್ಕೂ ಹೆಚ್ಚು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ರಿಲಯನ್ಸ್ ಪಾಲುದಾರಿಕೆಯಾಗುವ ಮೊದಲು 2011 ರಲ್ಲಿ ಟಾಟಾ ಕಂಪನಿ ಸೇರಿದಂತೆ ಇತರೇ ವಿಮಾನ ಕಂಪನಿಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ. ಕೊನೆಗೆ ದೊಡ್ಡ ಎಂಜಿನಿಯರಿಂಗ್ ಸೌಲಭ್ಯ ವಿಚಾರದಲ್ಲಿ ರಿಲಯನ್ಸ್ ಕಂಪನಿಗೆ ಅನುಭವ ಇರುವ ಹಿನ್ನೆಲೆಯಲ್ಲಿ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು.
ಕೈಗಾರಿಕಾ ಬೆಳವಣಿಗೆಯಲ್ಲಿ ಈ ಒಪ್ಪಂದ ಮಹತ್ವವಾಗಿದ್ದು, ನಮ್ಮ ಎಂಜಿನಿಯರ್ ಮತ್ತು ಕೆಲಸಗಾರರು ಮುಖ್ಯ ಪಾತ್ರವನ್ನು ವಹಿಸಿ ವಿಮಾನವನ್ನು ತಯಾರಿಸುತ್ತಾರೆ. ಈ ವೇಳೆ ನಮ್ಮ ಎಂಜಿನಿಯರ್ ಭಾರತೀಯರಿಗೆ ವಿಮಾನ ತಯಾರಿಸುವ ಕೌಶಲ್ಯವನ್ನು ತಿಳಿಸಿಕೊಡುತ್ತಾರೆ. ಈ ಮೂಲಕ ರಿಲಯನ್ಸ್ ಜಂಟಿ ಉದ್ಯಮಕ್ಕೆ ಬಂಡವಾಳ ಹಾಕಿ ಭಾರತದ ಅಭಿವೃದ್ಧಿಗೂ ಸಹಾಯ ಮಾಡುತ್ತದೆ. ಭಾರತ ಸರ್ಕಾರದ ನಿಯಮಗಳ ಪ್ರಕಾರ ರಿಲಯನ್ಸ್- ಡಸಾಲ್ಟ್ ಜಂಟಿ ಉದ್ಯಮದಲ್ಲಿ ಶೇ.51 ಶೇರುಗಳು ರಿಲಯನ್ಸ್ ಹೊಂದಿದ್ದರೆ, ಶೇ.49 ರಷ್ಟು ಶೇರುಗಳು ಡಸಾಲ್ಟ್ ಕಂಪನಿ ಹೊಂದಿರಲಿದೆ ಎಂದು ವಿವರಿಸಿದರು.
126 ವಿಮಾನ ಮತ್ತು ಹಾರಲು ಸಿದ್ಧವಾಗಿರುವ 36 ವಿಮಾನದ ದರಕ್ಕೆ ಹೋಲಿಸಿದರೆ ಶೇ.9 ರಷ್ಟು ಕಡಿಮೆ ದರದಲ್ಲಿ ವಿಮಾನ ಉತ್ಪಾದನೆಯಾಗಲಿದೆ ಎಂದು ಈ ವೇಳೆ ಎರಿಕ್ ಟ್ರಾಪ್ಪಿಯರ್ ಹೇಳಿದರು.
#WATCH: ANI editor Smita Prakash interviews CEO Eric Trappier at the Dassault aviation hangar in Istre- Le Tube air… https://t.co/0igomqmE2i
— ANI (@ANI) November 13, 2018
#WATCH I don't lie.The truth I declared before and the statements I made are true. I don't have a reputation of lying. In my position as CEO, you don't lie: Dassault CEO Eric Trappier responds to Rahul Gandhi's allegations #Rafale pic.twitter.com/grvcpsWkj7
— ANI (@ANI) November 13, 2018
#Visuals: First look of the #Rafale jet for the Indian Air Force, from the Istre-Le Tube airbase in France pic.twitter.com/Qv4aJdgjI7
— ANI (@ANI) November 13, 2018
Have 7 years to perform our offset. During the first 3 years, we are not obliged to say with who we are working. Already settled agreement with 30 companies, which represents 40% of total offset obligation as per contract. Reliance is 10% out of the 40: Dassault CEO Eric Trappier pic.twitter.com/beWbr5GFBS
— ANI (@ANI) November 13, 2018
We chose Ambani by ourselves. We already have 30 partners other than Reliance. The IAF is supporting the deal because they need the fighter jets for their own defence to be at the top: Dassault CEO Eric Trappier on allegations of corruption in the Reliance-Dassault JV deal pic.twitter.com/GPzjadkWz8
— ANI (@ANI) November 13, 2018
For the time being, to start the work in the hanger and to pay workers and employees, we have already put 40 crores. But it will be increased to 800 crores, which implies 400 crores by Dassault in the five coming years: Dassault CEO Eric Trappier #Rafale https://t.co/hhFAoh7px8
— ANI (@ANI) November 13, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews