ಫ್ಲೋರಿಡಾ: ಕಳೆದ ವಾರ ಫ್ಲೋರಿಡಾದಲ್ಲಿ ಪಾದಚಾರಿ ಸೇತುವೆ ಕುಸಿದು 6 ಮಂದಿ ಸಾವುನ್ನಪ್ಪಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಬಳಿ ಮಾರ್ಚ್ 15 ರಂದು ಸೇತುವೆ ಕುಸಿದಿತ್ತು. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, ಹಲವು ವಾಹನಗಳು ಜಖಂಗೊಂಡಿದ್ದವು.
Advertisement
174 ಅಡಿ ಎತ್ತರವಿರುವ ಸೇತುವೆಯು ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ಸ್ವೀಟ್‍ವಾಟರ್ ನಗರವನ್ನ ಸಂಪರ್ಕಿಸಲು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಮಾರ್ಚ್ 10ರಂದು ಸೇತುವೆಯನ್ನ ಲೋಕಾರ್ಪಣೆ ಮಾಡಲಾಗಿತ್ತು. ವಾಹನ ದಟ್ಟಣೆ ಇರುವ ರಸ್ತೆಯನ್ನ ದಾಟಲು ಜನರಿಗೆ ಅನುಕೂಲವಾಗಲು ಈ ಸೇತುವೆಯನ್ನ ನಿರ್ಮಿಸಲಾಗಿತ್ತು.
Advertisement
Advertisement
Advertisement
ಸುಮಾರು 14.2 ಮಿಲಿಯನ್ ಡಾಲರ್ (ಅಂದಾಜು 92 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆ, ಚಂಡಮಾರುತಗಳನ್ನ ಸಹಿಸಬಲ್ಲ ಮತ್ತು 100 ವರ್ಷಗಳ ಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿತ್ತು.
ವಿಪರ್ಯಾಸವೆಂಬಂತೆ ಸೇತುವೆ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸದ್ಯ ರಾಷ್ಟ್ರೀಯ ಸಾರಿಗೆ ಮತ್ತು ಸುರಕ್ಷತಾ ಮಂಡಳಿಯ ತಂಡವು ಸೇತುವೆ ಕುಸಿದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿನಿಯೊಬ್ಬರು ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಘಟನೆಯ ಬಳಿಕ ವೇಗವರ್ಧಿತ ಸೇತುವೆ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.
https://www.instagram.com/p/BgWp1fCBPqG/?taken-at=249903486