ಹಾವೇರಿ: ರಾಣೆಬೆನ್ನೂರಿನ ವಂದೇ ಮಾತರಂ ಸೇವಾ ಸಂಸ್ಥೆಯು ಈ ಬಾರಿ ಗಣೇಶ ಹಬ್ಬದ ಪ್ರಯುಕ್ತ ಇಲ್ಲಿನ ನಗರಸಭೆ ಮೈದಾನದಲ್ಲಿ ವಿಘ್ನೇಶ್ವರನ ದಶಾವತಾರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡುತ್ತಿದೆ.
ಕಳೆದ 14 ವರ್ಷಗಳಿಂದ ವಂದೇ ಮಾತರಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿ ನೇತೃತ್ವದಲ್ಲಿ ಪ್ರತಿ ವರ್ಷವು ಒಂದಲ್ಲ ಒಂದು ವಿಶೇಷ ಸಂದೇಶದೊಂದಿಗೆ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅಂತೆಯೇ ಈ ಬಾರಿ ಇಂದಿನ ಪೀಳಿಗೆಗೆ ಹಾಗೂ ಸಮಾಜಕ್ಕೆ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದನ್ನೂ ಓದಿ: ಮಡಿವಾಳೇಶ್ವರ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣು
Advertisement
Advertisement
ಗಣೇಶನ ದಶಾವತಾರ ದರ್ಶನಕ್ಕೆ ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 10:30ರ ವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯನ್ನು ಮದುವೆ ಆಗಲು ನಿರ್ದೇಶಕ ಮಹೇಶ್ ಭಟ್ ಮತಾಂತರಗೊಂಡಿದ್ದಾರೆ ಎಂದು ಕಂಗನಾ ಆರೋಪ
Advertisement
Advertisement
ಈ ಕುರಿತು ಮಾತನಾಡಿರುವ ವಂದೇ ಮಾತರಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಎಸ್.ಬುರಡಿಕಟ್ಟಿ, ರಾಣಿಬೆನ್ನೂರಿನ ಇಂದ್ರಕುಮಾರ್ ಮತ್ತು ಹರ್ಷ ಅವರ ಸಂಗಡಿಗರಿಂದ ನಗರಸಭೆ ಕ್ರೀಡಾಂಗಣದಲ್ಲಿ ದಶಾವತಾರ ರೂಪದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 29 ದಿನಗಳ ಕಾಲ ಗಣಪತಿಯ ಸಾರ್ವಜನಿಕ ದರ್ಶನಕ್ಕಾಗಿ ಅವಕಾಶ ಕಲ್ಪಿಸಿದ್ದು, ಸೆಪ್ಟಂಬರ್ 28ರಂದು ನಗರದಲ್ಲಿ ಶೋಭಾಯಾತ್ರೆಯ ಮೂಲಕ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.