ಅಮರಾವತಿ: ನವರಾತ್ರಿ ಉತ್ಸವವೂ ಎಲ್ಲೆಡೆ ಅದ್ಧೂರಿಯಾಗಿ ನೆರವೇರುತ್ತಿದೆ. ಆದರೆ ಆಂಧ್ರಪ್ರದೇಶದ ಲಕ್ಷ್ಮೀ ದೇವಸ್ಥಾನ ಒಂದರಲ್ಲಿ ಹಣ ಮತ್ತು ಬಂಗಾರದಿಂದ ಶೃಂಗರಿಸಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ವಿಶಾಖಪಟ್ಟಣಂನ ಪ್ರಸಿದ್ಧ ಕನ್ನಿಕಾ ಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮೀ ಅವತಾರಂ ದೇವಿಗೆ 4 ಕೋಟಿ ರೂ. ಮೌಲ್ಯದ ನೋಟು ಮತ್ತು 8 ಕೆಜಿ ಚಿನ್ನದಿಂದ ಅಲಂಕರಿಸಲಾಗಿದೆ.
Advertisement
9 ದಿನದ ಉತ್ಸವ ಸಮಯದಲ್ಲಿ ದೇವತೆಯನ್ನು ಪ್ರತೀ ವರ್ಷವು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತಿದ್ದು, ಎಂಟನೇ ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ಬಾರಿ ನೋಟು ಮತ್ತು ಚಿನ್ನದಿಂದ ಅಲಂಕರಿಸಿ ಲಕ್ಷ್ಮಿಯನ್ನು ಪೂಜಿಸಲಾಗಿದೆ.
Advertisement
ಹೊಸದಾಗಿ ಪರಿಚಯಿಸಲಾದ 2000 ರೂ. ನೋಟುಗಳು, ನಿಷೇಧಗೊಂಡಿರುವ 500 ರೂ. 1 ಸಾವಿರ ರೂ. ಮುಖಬೆಲೆಯ ನೋಟುಗಳು ಸೇರಿದಂತೆ ಚಲಾವಣೆಯಲ್ಲಿರುವ ಎಲ್ಲ ಕರೆನ್ಸಿ ನೋಟುಗಳನ್ನು ಬಳಸಿ ಲಕ್ಷ್ಮಿ ಕುಳಿತುಕೊಂಡಿದ್ದ ಮಂಟಪವನ್ನು ಶೃಂಗರಿಸಲಾಗಿದೆ.
Advertisement
ಭಕ್ತರು ತಮ್ಮ ಸಂಕಷ್ಟ ನಿವಾರಣೆಗಾಗಿ ದೇಣಿಗೆ ರೂಪದಲ್ಲಿ ನೀಡಿರುವ ನೋಟುಗಳನ್ನು ಇಲ್ಲಿ ಬಳಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.