ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಗಳ (Elephants) ತಾಲೀಮು ಆರಂಭಿಸಲಾಗಿದೆ.
Advertisement
ಕ್ಯಾಪ್ಟನ್ ಅಭಿಮನ್ಯು (Captain Abhimanyu) ನೇತೃತ್ವದ ದಸರಾ ಗಜಪಡೆಗಳು ರಾಜಬೀದಿಗಳಲ್ಲಿ ಗಜಗಾಂಭಿರ್ಯದಿಂದ ಹೆಜ್ಜೆ ಹಾಕಿದೆ. ಅರಮನೆಯಿಂದ (Palace) ಬನ್ನಿಮಂಟಪದವರೆಗೆ ದಸರಾ ಗಜಪಡೆಗಳಿಗೆ ತಾಲೀಮು ಆರಂಭಿಸಲಾಗಿದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ದಸರಾ ಆನೆಗಳು ವಾಕಿಂಗ್ ಮಾಡುತ್ತವೆ. ಮೊದಲ ಹಂತದಲ್ಲಿ ಕಾಡಿನಿಂದ ಅರಮನೆಗೆ 9 ಆನೆಗಳು ಆಗಮಿಸಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ಆರಂಭಿಸಲಾಗಿದೆ. ಇದನ್ನೂ ಓದಿ: ಬಾಂಗ್ಲಾದಿಂದ ಭಾರತಕ್ಕೆ ಹಿಂದೂಗಳೇ ಬರ್ತಿಲ್ಲ, ಆದ್ರೆ 35 ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ: ಅಸ್ಸಾಂ ಸಿಎಂ
Advertisement
Advertisement
ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆಗಳು ಬನ್ನಿ ಮಂಟಪ ತಲುಪಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯಲಿದೆ. ಜಂಬೂ ಸವಾರಿಯ ದಿನ ಯಾವುದೇ ತೊಂದರೆಯಾಗದಿರಲಿ ಎಂದು ತಾಲೀಮು ನಡೆಸಲಾಗುತ್ತಿದೆ. ಇದನ್ನೂ ಓದಿ: ದೆಹಲಿಯಿಂದ ವಾಪಸ್ಸಾದ ಪರಮೇಶ್ವರ್ – ಮುಡಾ ಹಗರಣ ಚರ್ಚೆ ಮಾಡಿದ್ದೇವೆ ಎಂದ ಗೃಹ ಸಚಿವ
Advertisement