ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಮಂಡ್ಯ (Mandya) ಜಿಲ್ಲೆ ರಂಗನತಿಟ್ಟು ಪಕ್ಷಿಧಾಮ (Ranganathittu Bird Sanctuary) ಹಾಗೂ ಕೃಷ್ಣರಾಜಸಾಗರ ಆಣೆಕಟ್ಟು (KRS Dam) ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ.
ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯ ಹಿರಿಮೆ ಮತ್ತು ಪ್ರತಿಷ್ಠೆಯಾದ ವಿಶ್ವವಿಖ್ಯಾತ ಕೆಆರ್‌ಎಸ್ ಜಲಾಶಯ ಹಾಗೂ ರಂಗನತಿಟ್ಟು ಪಕ್ಷಿಧಾಮದ ಪ್ರತಿರೂಪ ಮಾದರಿಯನ್ನು ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಗಿತ್ತು. ಕರ್ನಾಟಕದ ಪಕ್ಷಿಕಾಶಿ ಎಂದೇ ಹೆಸರುವಾಸಿಯಾಗಿರುವ ರಂಗನತಿಟ್ಟು ಪಕ್ಷಿಧಾಮ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಇದನ್ನೂ ಓದಿ: ದರ್ಶನ್, ಪವಿತ್ರಾಗೆ ನೋ ರಿಲೀಫ್ – ಕೋರ್ಟ್ ಜಾಮೀನು ನೀಡದ್ದು ಯಾಕೆ?
ಯಾವ ಜಿಲ್ಲೆಗೆ ಯಾವ ಪ್ರಶಸ್ತಿ?
ಪ್ರಥಮ – ಮಂಡ್ಯ (ರಂಗನತಿಟ್ಟು ಪಕ್ಷಿಧಾಮ ಹಾಗೂ ಕೆಆರ್‌ಎಸ್ ಅಣೆಕಟ್ಟು)
ದ್ವಿತೀಯ – ಧಾರವಾಡ (ಇಸ್ರೊ ಗಗನಯಾನದಲ್ಲಿ ಹಣ್ಣಿನ ನೊಣಗಳು)
ತೃತೀಯ – ಚಾಮರಾಜನಗರ (ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು)
ಸಮಾಧಾನಕರ ಬಹುಮಾನ
ಉಡುಪಿ – ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು
ಗದಗ – ಗ್ರಾಮಸಭೆ–ಹಳ್ಳಿಯ ವಿಧಾನಸಭೆ
ಮೈಸೂರು -ಮಾನವ ಕುಲದ ಸಮಾನತೆ–ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ
ಚಿಕ್ಕಮಗಳೂರು – ತೇಜಸ್ವಿ ವಿಸ್ಮಯ ಲೋಕ
ಇಲಾಖೆ, ನಿಗಮ ಹಾಗೂ ಮಂಡಳಿಗಳ ವಿಭಾಗ
ಪ್ರಥಮ – ವಾರ್ತಾ ಇಲಾಖೆ (ವಿಶ್ವಗುರು ಬಸವಣ್ಣ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ)
ದ್ವಿತೀಯ – ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು)
ತೃತೀಯ – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಮೈಸೂರು ಸ್ಯಾಂಡಲ್‌ವುಡ್ ಸೋಪು ಕಿರು ಪರಿಚಯ)
ಸಮಾಧಾನಕರ ಬಹುಮಾನ
ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ – ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ- ಸ್ವಸ್ಥ ಮೆದುಳು:ಸ್ಪಷ್ಟ ಮಾತು
ಕಾರ್ಮಿಕ ಇಲಾಖೆ – ಕಾರ್ಮಿಕ ಹಿತರಕ್ಷಣೆ
ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ – ನಿಗಮದ ಉತ್ಪನ್ನಗಳ ಮಾದರಿ