ನಾಡಿನಲ್ಲೆಡೆ ದಸಾರ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬದಿಂದ ದೂರು ಇರುವ ಹಲವರು ಹಬ್ಬಕ್ಕಾಗಿ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರೆ, ಮತ್ತೆ ಕೆಲವರು ಈ ಬಾರಿ ಜಂಬೂ ಸವಾರಿ ನೋಡಬೇಕೆಂದು ಪ್ಲಾನ್ ಮಾಡುತ್ತಿರುತ್ತಾರೆ. ವಿಶ್ವಾದ್ಯಂತ ಜಂಬೂ ಸವಾರಿ ಹೇಗೆ ಪ್ರಸಿದ್ಧವೋ, ಹಾಗೆಯೇ ಮೈಸೂರು ಪಾಕ್ ಸಹ ಅಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರಿಗೆ ಬಂದ ಪ್ರವಾಸಿಗರು ‘ಮೈಸೂರು ಪಾಕ್’ ಸವಿಯಲೇ ಬೇಕು.
ಮೈಸೂರು ಪಾಕ್ ಇತಿಹಾಸ:
ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕಾಕಾಸುರ ಮಾದಪ್ಪ ಎಂಬ ಭಟ್ಟರು ಕೆಲಸ ಮಾಡಿಕೊಂಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯ ನೇತೃತ್ವವನ್ನು ಕಾಕಾಸುರ ಮಾದಪ್ಪನವರೇ ವಹಿಸಿಕೊಂಡಿದ್ದರು. ಒಂದು ದಿನ ಮಹಾರಾಜರು ಕಾಕಾಸುರು ಅವರಿಗೆ ಸಿಹಿ ತಿಂಡಿ ಮಾಡುವಂತೆ ಆದೇಶಿಸುತ್ತಾರೆ.
Advertisement
Advertisement
ಮಹಾರಾಜರ ಆದೇಶ ಸ್ವೀಕರಿಸಿದ ಕಾಕಾಸರು ಭಟ್ಟರು, ಮೊದಲು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು `ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).
Advertisement
ಹೊಸ ಸಿಹಿ ತಿಂಡಿಯ ರುಚಿ ನೀಡಿದ ಮಹಾರಾಜರು ಏನಿದರ ಹೆಸರು ಎಂದು ಕೇಳಿದ್ದರಂತೆ ಆಗಾಗ ಭಟ್ಟರು ಪಾಕದಿಂದ ಮಾಡಿದ ಸಿಹಿ ಅಂದರಂತೆ. ಹಾಗಾದರೆ ಮೈಸೂರು ಪಾಕ್ ಎಂದು ಹೆಸರು ಇಡೋಣ ಅಂತಾ ಹೇಳಿದ್ದರು ಎಂಬ ಕಥೆಯನ್ನು ಜನರು ಹೇಳುತ್ತಾರೆ. ಕಾಕಾಸುರ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸಿಸುತ್ತಿದ್ದು, ಗುರು ಸ್ವೀಟ್ಸ್ ಎಂಬ ಸಿಹಿ ಅಂಗಡಿಯನ್ನು ಹೊಂದಿದ್ದಾರೆ.
Advertisement
ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ರುಚಿಯನ್ನು ಉಳಿಸಿಕೊಂಡು ಬಂದಿದ್ದು, ಅಂಗಡಿಯ ಮಾಹಿತಿ ಇದ್ದವರೂ ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.
ಮೈಸೂರು ಪಾಕ್ ನಮ್ಮದು ತಮಿಳರ ವಾದ..?
ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ ಹೇಳುವ ಪ್ರಕಾರ, 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.
ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ (ಜಿಯಾಗ್ರಾಫಿಕಲ್ ಇಂಡಿಕೇಷನ್-ಐಜಿ) ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಕನ್ನಡಿಗರು ಮತ್ತು ತಮಿಳರ ಮಧ್ಯೆ ಭಾರೀ ಚರ್ಚೆ ಆರಂಭವಾಗಿತ್ತು. ದಕ್ಷಿಣ ಭಾರತದ ಸಮೃದ್ಧ ಸಿಹಿ ತಿನಿಸಾದ ಮೈಸೂರು ಪಾಕ್ ತಯಾರಿಸಲು ಹೇರಳ ಪ್ರಮಾಣದ ಶುದ್ಧ ತುಪ್ಪ, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಲಾಗುತ್ತದೆ. ಆದರೆ ಮೈಸೂರು ಪಾಕ್ ಹಾಗೂ ಧಾರವಾಡ ಪೇಡಗಳಿಗೆ ಈಗಾಗಲೇ ಕರ್ನಾಟಕಕ್ಕೆ ಜಿಐ ಸ್ಥಾನದ ಹಕ್ಕು ನೀಡಲಾಗಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ದಸರಾ ಸುದ್ದಿಗಳು:
1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?
2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ
3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್