ಬೆಂಗಳೂರು: ಅಕ್ಟೋಬರ್ 10,11 ಮತ್ತು 12 ರಂದು ಅರಸೀಕೆರೆ (Arsikere) ಮತ್ತು ಮೈಸೂರು (Mysuru) ನಿಲ್ದಾಣಗಳ ನಡುವೆ ಎರಡೂ ದಿಕ್ಕುಗಳಲ್ಲಿ ಮೂರು ಟ್ರಿಪ್ ಡೆಮು ವಿಶೇಷ ರೈಲುಗಳನ್ನು (Demu Special Train) ಓಡಿಸಲು ನೈಋತ್ಯ ರೈಲ್ವೇ (South Western Railway) ನಿರ್ಧಾರ ಕೈಗೊಂಡಿದೆ.
ರೈಲು ಸಂಖ್ಯೆ 06207 ಅರಸೀಕೆರೆ-ಮೈಸೂರು ಡೆಮು ವಿಶೇಷ ರೈಲು ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ದಿನ ಸಂಜೆ 6:40ಕ್ಕೆ ಮೈಸೂರು ತಲುಪಲಿದೆ. ರೈಲು ಸಂಖ್ಯೆ 06208 ಮೈಸೂರು-ಅರಸೀಕೆರೆ ಡೆಮು ವಿಶೇಷ ರೈಲು ಮೈಸೂರಿನಿಂದ ಸಂಜೆ 6:50ಕ್ಕೆ ಹೊರಟು ಅದೇ ದಿನ ರಾತ್ರಿ 11:43ಕ್ಕೆ ಅರಸೀಕೆರೆ ತಲುಪಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಲೀಡರ್, ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ: ಡಿಕೆಶಿ
Advertisement
Advertisement
ಹಬ್ಬನಘಟ್ಟ, ಬಾಗೇಶಪುರ, ಹಾಸನ, ಮಾವಿನಕೆರೆ, ಹೊಳೆ ನರಸೀಪುರ, ಅನ್ನೇಚಾಕನಹಳ್ಳಿ ಹಾಲ್ಟ್, ಶ್ರವಣೂರು ಹಾಲ್ಟ್, ಮಂದಗೆರೆ, ಬಿರಹಳ್ಳಿ ಹಾಲ್ಟ್, ಅಕ್ಕಿಹೆಬ್ಬಾಳು, ಹೊಸ ಅಗ್ರಹಾರ, ಅರ್ಜುನಹಳ್ಳಿ ಹಾಲ್ಟ್, ಹಂಪಾಪುರ, ಕೃಷ್ಣರಾಜನಗರ, ಡೋರನಹಳ್ಳಿ, ಸಾಗರಕಟ್ಟೆ, ಕಲ್ಲೂರು ಎಡಹಳ್ಳಿ ಹಾಲ್ಟ್, ಕೃಷ್ಣರಾಜಸಾಗರ, ಮತ್ತು ಬೆಳಗುಳ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.
Advertisement