ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2018 ಹಿನ್ನೆಲೆಯಲ್ಲಿ ಪ್ರಯಾಣಿಕರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವಿಮಾನ ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡುತ್ತಿದೆ.
ಮೈಸೂರು ದಸರಾಗೆ ವಿಶೇಷ ವಿಮಾನಯಾನ ಸೇವೆ ಆರಂಭವಾಗಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮೈಸೂರಿನಿಂದ ಬೆಂಗಳೂರಿಗೆ ಕೇವಲ 999 ರೂ. ಗೆ ವಿಶೇಷ ವಿಮಾನಯಾನದ ಬಂಪರ್ ಆಫರ್ ಅನ್ನು ನೀಡಿದೆ. ಆಕಾಶ್ ಅಂಬಾರಿ ಹೆಸರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ವಿಮಾನ ವ್ಯವಸ್ಥೆಯನ್ನು ಕಲ್ಪಿಸಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಫ್ಲೈಟ್ ಗಳು ಹಾರಲಿವೆ.
Advertisement
Advertisement
ಅಕ್ಟೋಬರ್ 10 ರಿಂದ 19 ರ ವರೆಗೆ 9 ದಿನಗಳವರೆಗೆ ಪ್ರಯಾಣಿಕರ ಸೇವೆಗೆ ಲಭ್ಯವಿದ್ದು, ಮಧ್ಯಾಹ್ನ 2:10 ಕ್ಕೆ ಬೆಂಗಳೂರಿನಿಂದ ಹೊರಟು 3 ಗಂಟೆ ಮೈಸೂರು ತಲುಪುತ್ತದೆ. ಬಳಿಕ 3;30 ರಿಂದ ಮೈಸೂರಿನಿಂದ ಹೊರಟು 4:20 ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಆನ್‍ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ವಿದೇಶಿ ಪ್ರಯಾಣಿಕರು ಹಾಗೂ ಸ್ಥಳೀಯರ ಆಗಸ ಯಾತ್ರೆಗೆ ವಿಶೇಷ ವ್ಯವಸ್ಥೆ ಇದಾಗಿದ್ದು, ವಿಶೇಷ ವಿಮಾನಗಳು ಆಕಾಶ್ ಅಂಬಾರಿ ಹೆಸರಿನಲ್ಲಿ ಹಾರಲಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv