– ಮೊದಲ ಬಾರಿಗೆ ಸಂಜೆ ವೇಳೆ ಅರಮನೆಗೆ ಬಂದ ಗಜಪಡೆ
ಮೈಸೂರು: ನಗರದ ಅರಣ್ಯ ಭವನದಲ್ಲಿ ದಸರಾ ಗಜಪಡೆಗೆ (Dasara Gajapade) ಇಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ಬಳಿಕ ಆ.4ರಂದು ಕಾಡಿನಿಂದ ನಾಡಿಗೆ ಬಂದ ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡವನ್ನು ಅರಮನೆ (Mysuru Palace) ಅಂಗಳಕ್ಕೆ ಸ್ವಾಗತಿಸಲಾಯಿತು.
ಮೊದಲಿಗೆ ಅರಣ್ಯಭವನದಲ್ಲಿ ಪೂಜೆಯ ವೇಳೆ ಮಳೆ ಬಂದಿದ್ದು, ಮಳೆಯಲ್ಲಿಯೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂಜೆ ಸಲ್ಲಿಸಿದರು. ಬಳಿಕ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ, ಲಕ್ಷ್ಮಿ ಆನೆಗಳು ಅರಣ್ಯ ಭವನದಿಂದ ಅರಮನೆಯೆಡೆಗೆ ಹೆಜ್ಜೆ ಹಾಕಿದವು. ಅರಮನೆಯ ಜಯಮಾರ್ತಾಂಡ ದ್ವಾರ ಮೂಲಕ ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿ ಪೂಜೆ ಸಲ್ಲಿಸಿ ಬರಮಾಡಿಕೊಂಡಿತು. ಇದನ್ನೂ ಓದಿ: Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?
ಇದೇ ಮೊದಲ ಬಾರಿಗೆ ಸಂಜೆ ವೇಳೆಯಲ್ಲಿ ಆನೆಗಳನ್ನು ಅರಮನೆ ಆವರಣಕ್ಕೆ ಬರಮಾಡಿಕೊಂಡಿದ್ದು, ಜಗಮಗಿಸುವ ದೀಪದ ಬೆಳಕಿನಲ್ಲಿ ಆನೆಗಳು ಅರಮನೆ ಆವರಣಕ್ಕೆ ಎಂಟ್ರಿಯಾದವು. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಮೊದಲ ಹಂತದ ಗಜಪಯಣಕ್ಕೆ ಚಾಲನೆ