-
ಮಡಿಕೇರಿಗೆ ಮುತ್ತಿಕೊಂಡಿದೆ ಮಿಂಚುಹುಳು
ಮಡಿಕೇರಿ: ದಸರಾ ಹಬ್ಬದ (Madikeri Dasara) ಹಿನ್ನೆಲೆಯಲ್ಲಿ ಇದೀಗಾ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರದ್ದೇ ಕಲರವ. ಹೆಚ್ಚಾಗಿದೆ. ಅದ್ರಲ್ಲೂ ದಸರಾದ ಹಬ್ಬದ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ರಜೆಯ ಮಜಾ ಅನುಭವಿಸಲು ಲಕ್ಷಾಂತರ ಮಂದಿ ಪ್ರವಾಸಿಗರು ಕೊಡಗು (Kodagu) ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವೆಡೆಯ ಪ್ರವಾಸಿತಾಣದಲ್ಲಿ ಪ್ರವಾಸಿಗರೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ.
ಹೌದು. ರಾಜ್ಯದ ಎಲ್ಲೆಡೆಯೂ ಇದೀಗ ದಸರಾ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಅದ್ರಲ್ಲೂ ಮಕ್ಕಳಿಗೆ ದಸರಾ ಹಬ್ಬದ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಸೇರಿದಂತೆ ಮನೆಯ ಕುಟುಂಬಸ್ಥರು ಮೈಸೂರು ಹಾಗೂ ಕೊಡಗಿನ ಪ್ರವಾಸಿತಾಣಗಳಿಗೆ (Kodagu Tourist Place) ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಅದ್ರಲ್ಲೂ ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ಹಬ್ಬ ಕಳೆಗಟ್ಟಿದೆ. ಮಡಿಕೇರಿಯ ರಾಜಾಸೀಟ್‌ಗೆ ಬೆಳಗ್ಗಿನಿಂದ ಸಂಜೆ ವರೆಗೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇದನ್ನೂ ಓದಿ: ಮೈಸೂರು ದಸರಾದಂತೆ ಮಡಿಕೇರಿ ದಸರಾ ರೂಢಿಗೆ ಬಂದದ್ದು ಹೇಗೆ?
ಮಡಿಕೇರಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾದ ಕಾವೇರಿ ನಿಸರ್ಗಧಾಮ, ದುಬಾರೆ, ನಾಗರಹೊಳೆ ಅಭಯಾರಣ್ಯ, ಇರ್ಪುಜಲಪಾತ, ಮಲ್ಲಳ್ಳಿಫಾಲ್ಸ್ ಹಾಗೂ ಪುಣ್ಯ ಕ್ಷೇತ್ರಗಳಾದ ತಲಕಾವೇರಿ ಭಾಗಮಂಡಲ ತಾಣಗಳು ಪ್ರವಾಸಿಗರಿಂದ ತುಂಬಿ ಹೋಗಿವೆ. ರಾಜಾಸೀಟ್, ಗದ್ದುಗೆ, ಅಬ್ಬಿಫಾಲ್ಸ್, ಓಂಕಾರೇಶ್ವರ ದೇವಾಲಯ ಹಾಗೂ ಮಾಂದಲ ಪಟ್ಟಿಗಳಿಗೆ ಪ್ರವಾಸಿಗರು ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಇಲ್ಲಿನ ಸುತ್ತ ಮುತ್ತಲ ವರ್ತಕರು ಭರ್ಜರಿ ವ್ಯಾಪಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ಹಬ್ಬ ಕಳೆಗಟ್ಟಿದು ಶುಕ್ರವಾರದಿಂದ ಭಾನುವಾರದ ವರೆಗೆ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಮತ್ತಷ್ಟು ಪ್ರವಾಸಿಗರ ದಂಡು ಕೊಡಗಿನತ್ತ ಹರಿದು ಬರಲ್ಲಿದೆ. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳು ನಾಡಿದ ದೈವ ನರ್ತನ – ಕಾನೂನು ಸಮರಕ್ಕೆ ಮುಂದಾಗಿರುವ ಕೊಡಗು ದೈವ ನರ್ತಕರ ಸಂಘ
ಮಡಿಕೇರಿಗೆ ಮಿಂಚು ಹುಳು ಅಲಂಕಾರ:
ದಸರಾ ಸಂಭ್ರಮ ಮನೆ ಮಾಡಿರುವ ಮಡಿಕೇರಿಯಲ್ಲಿ ದೀಪಾಲಂಕಾರ ಜನರ ಕಣ್ಮನ ಸೆಳೆಯುವಂತೆ ಮಾಡಿದೆ. ಇಡೀ ನಗರವೇ ಮಿಂಚು ಹುಳುವಿನಿಂದ ಮುತ್ತಿಕೊಂಡಂತೆ ಕಾಣುವಂತೆ ದೀಪಾಲಂಕಾರ ಇದೆ. ನಗರದಲ್ಲಿ ಎಲ್ಲೆಲ್ಲೂ ಬಣ್ಣ ಬಣ್ಣದ ದೀಪಾಲಂಕಾರ ಕಣ್ಮನ ಸೆಳೆಯು ವಂತಿದೆ. ಟೌನ್‌ಹಾಲ್, ನಗರಸಭಾ ಕಟ್ಟಡ ಸೇರಿದಂತೆ ಸರ್ಕಾರಿ ಕಟ್ಟಡಗಳು ಸೇರಿದಂತೆ ಬೃಹತ್ ಖಾಸಗಿ ಕಟ್ಟಡಗಳಿಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ಇಡೀ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.