ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮೈಸೂರು ಪೊಲೀಸ್ ಇಲಾಖೆ ನಗರದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದೆ.
ದಸರಾ ಸಮಾರಂಭದಲ್ಲಿ ಒಟ್ಟು 5,284 ಪೊಲೀಸ್ ಸಿಬ್ಬಂದಿ, 1,600 ಹೋಮ್ ಗಾರ್ಡ್ ಗಳು, 46 ಭದ್ರತಾ ತಪಾಸಣಾ ಪಡೆ, 57 ಪೊಲೀಸ್ ತುಕಡಿ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ. ಇದಲ್ಲದೇ ಅಂಬಾರಿ ಹೋಗುವ ಜಾಗದಲ್ಲಿ ಮತ್ತು ಮೈಸೂರಿನ ಸ್ಮೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ, ಸಿಸಿಟಿಟಿ ಲಾಂಗ್ ಡಿಸ್ಟೆನ್ಸ್ ವಿಡಿಯೋಗ್ರಫಿಯನ್ನು ಹಾಕಲಾಗಿದೆ. ಇದಲ್ಲದೇ ಜಂಬೂ ಸವಾರಿ ಮೆರವಣಿಗೆ ರಸ್ತೆಯಲ್ಲಿ 76 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ.
Advertisement
ಸಾರ್ವಜನಿಕರ ಹಾಗೂ ಪ್ರವಾಸಿಗರ ಅನುಕೂಲಕ್ಕೆ ಮೈಸೂರಿನಾದ್ಯಾಂತ 40 ಪೊಲೀಸ್ ಹೆಲ್ಪ್ ಡೆಸ್ಕ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜನ ಸ್ನೇಹಿ ಪೊಲೀಸ್ ಉದ್ದೇಶದಿಂದ `ಮೇ ಐ ಹೆಲ್ಪ್ ಯು’ ಟ್ಯಾಗ್ ಬಳಸಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಗೊಂದಲಗಳಾಗಬಾರದೆಂದು ಬುಧವಾರದಿಂದ ಸೋಷಿಯಲ್ ಮೀಡಿಯಾಗಳನ್ನು ಬಳಕೆ ಮಾಡಿಕೊಂಡು ಟ್ರಾಫಿಕ್ ಮತ್ತು ಪಾರ್ಕಿಂಗ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಹೇಳಿದ್ದಾರೆ.
Advertisement
ಅಕ್ಟೋಬರ್ 14 ರಂದು ಜಂಬೂಸವಾರಿ ಮೆರವಣಿಗೆ ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆಯನ್ನು ಸಹ ಮಾಡಲಾಗುತ್ತಿದ್ದು, ಈ ಮೆರವಣಿಗೆಗೂ ಸಹ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗುತ್ತಿದೆ. ಈ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರತು ಪಡಿಸಿ ಮೆರವಣಿಗೆಯಲ್ಲಿ ದಸರಾ ಆನೆಗಳು, 40 ಜಾನಪದ ಕಲಾ ತಂಡಗಳು, ಯುವಸಂಭ್ರಮದಲ್ಲಿ ಭಾಗಿಯಾಗಿದ್ದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕೆಎಸ್ ಆರ್ ಪಿ, ಸಿಎಆರ್, ಅಶ್ವಾರೋಹಿ ಪೊಲೀಸ್ ಪಡೆಗಳು ಸೇರಿದಂತೆ 2,000ಕ್ಕೂ ಅಧಿಕ ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv