- ಆಯೂಧ ಪೂಜೆಗೆ ಖರೀದಿ ಭರಾಟೆ ಜೋರು
ಬೆಂಗಳೂರು: ದೇಶದೆಲ್ಲೆಡೆ ದಸರಾ (Dasara) ಸಂಭ್ರಮ ವಿಜೃಂಭಣೆಯಿಂದ ಸಾಗುತ್ತಿದ್ದು, ಬುಧವಾರ ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.
ಸಿಲಿಕಾನ್ ಸಿಲಿಕಾನ್ ಜನರು ಆಯುಧ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಣ್ಣು, ಹೂವು ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.ಇದನ್ನೂ ಓದಿ: Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?
ಯಾವುದೇ ಹಬ್ಬ ಬಂತೆಂದರೆ ಸಾಕು, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮಾರ್ಕೆಟ್‌ಗೆ ಮುಗಿಬೀಳುತ್ತಾರೆ. ಅದರಂತೆ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ.
ಕೆ.ಜಿಗೆ ಇಂದಿನ ದರ – ಹಳೆಯ ದರ
ಸೇವಂತಿ 300-400 ರೂ. 50-60 ರೂ.
ಕನಕಾಂಬರ 2000-2500 ರೂ. 1000-1500 ರೂ.
ಮಲ್ಲಿಗೆ 1500-2000 ರೂ. 700-1000 ರೂ.
ಗುಲಾಬಿ 400-450 ರೂ. 200-250 ರೂ.
ಕಾಕಡ 800 ರೂ. 600 ರೂ.
ಬಾಳೆಕಂಬ ಜೋಡಿ 60-100ರೂ. 30-40 ರೂ.
ಕುಂಬಳಕಾಯಿ 50-60ರೂ 20-30 ರೂ.