ಉಡುಪಿ: ಜಿಲ್ಲೆಯ ಮಹಾಲಕ್ಷ್ಮಿ ದೇವಸ್ಥಾನದ (MahaLaskshmi Temple) ದಸರಾ (Dasara) ಮಹೋತ್ಸವ ಸಂಪನ್ನಗೊಂಡಿದ್ದು ವೈಭವದ ಮೆರವಣಿಗೆ ನಡೆಯಿತು. ಕಾಪು ಕಡಲ ತೀರದಲ್ಲಿ ನವದುರ್ಗೆಯರಿಗೆ ಗಂಗಾವತಿ ನಡೆಸಿ, ಸಾವಿರಾರು ಜನರ ಸಮ್ಮುಖದಲ್ಲಿ ಜಲಸ್ತಂಭನ ಮಾಡಲಾಯಿತು.
Advertisement
ದಕ್ಷಿಣ ಭಾರತದ ಪ್ರಸಿದ್ಧ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ (Uchila Mahalakshmi Temple) ನವರಾತ್ರಿ (Navaratri) ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ನವ ದುರ್ಗೆಯರ ಮೂರ್ತಿಯನ್ನು 9 ದಿನ ಆರಾಧಿಸಿ, ಇಂದು ವಿಸರ್ಜನಾ ಮೆರವಣಿಗೆ ಮಾಡಲಾಯಿತು. ಸಮುದ್ರ ತೀರದಲ್ಲಿ ನವದುರ್ಗ ವಿಸರ್ಜನೆ ವಿಶೇಷವಾಗಿತ್ತು. ಇದಕ್ಕೂ ಮುನ್ನ ಹೆಲಿಕಾಪ್ಟರ್‌ನಲ್ಲಿ ಮೂರು ಸುತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂತನ ತಂತ್ರಜ್ಞಾನದ ಹೆಲಿಕಾಪ್ಟರ್ ನವ ದುರ್ಗೆಯರ ಸಮೀಪಕ್ಕೆ ಬಂದು ಮೂರು ಬಾರಿ ಪುಷ್ಪಾರ್ಚನೆ ಮಾಡಿದ್ದು ವಿಶೇಷವಾಗಿತ್ತು.
Advertisement
Advertisement
ಮೆರವಣಿಗೆಯ ವೈಭವದಲ್ಲಿ 80 ಕ್ಕಿಂತ ಹೆಚ್ಚು ಟ್ಯಾಬ್ಲೋಗಳು ಭಾಗಿಯಾದವು. ಗಣಪತಿ ಈಶ್ವರ ನವದುರ್ಗೆಯರು ಹನುಮಂತ ಮೂಷಿಕದ ಮೇಲೆ ಸಂಚಾರ ಹೊರಟ ವಿಘ್ನ ವಿನಾಶಕ ಕಾಳಿಂಗ ಮರ್ಧನ ಕೃಷ್ಣ, ಬಕಾಸುರ ರಥದಲ್ಲಿ ಸಂಚರಿಸುವ ಕೃಷ್ಣ ಅರ್ಜುನರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹುಲಿ ವೇಷ ಕುಣಿತ ವಿವಿಧ ಭಜನಾ ತಂಡಗಳು ಭಾಗಿಯಾದವು. ಇದನ್ನೂ ಓದಿ: ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ
Advertisement
ಕಳೆದ ಹತ್ತು ದಿನದಲ್ಲಿ ಸುಮಾರು 5 ಲಕ್ಷ ಜನ ಭಕ್ತರು ಶ್ರೀ ಕ್ಷೇತ್ರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಪ್ರಸಾದವನ್ನು ಸ್ವೀಕರಿಸಿದ್ದಾರೆ. ಮಹಾಲಕ್ಷ್ಮಿ ದೇವಸ್ಥಾನದಿಂದ ಹೆಜಮಾಡಿ ಟೋಲ್‍ವರೆಗೆ ಅಲ್ಲಿಂದ ಕಾಪುವಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದೆ. ಸುಮಾರು 25 kmಗಳ ಬೃಹತ್ ಮೆರವಣಿಗೆಯನ್ನು ಕೈಗೊಂಡು ಜಿಲ್ಲೆಯಲ್ಲೇ ಅತಿ ದೊಡ್ಡ ವೈಭವದ ಶೋಭಾ ಯಾತ್ರೆ ಎಂಬ ಹೆಗ್ಗಳಿಕೆಗೆ ಉಚ್ಚಿಲ ದಸರಾ ಪಾತ್ರವಾಗಿದೆ.
ರಾತ್ರಿ ಎರಡು ಗಂಟೆಯವರೆಗೂ ಕಾಪು ಕಡಲತೀರದವರೆಗೆ ನವ ದುರ್ಗೆಯರ ವೈಭವದ ಮೆರವಣಿಗೆ ನಡೆಯಿತು. ಅಲ್ಲಲ್ಲಿ ನಿಂತು ಜನ ದೇವರಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಜನ ಭಕ್ತ ಸಮುದಾಯದ ನಡುವೆ ಸಾಲಾಗಿ ನವ ದುರ್ಗೆಯರ ಮೂರ್ತಿಯನ್ನು ಇಟ್ಟು ಗಂಗರತಿ ಸಲ್ಲಿಸಲಾಯಿತು. 9 ದೇವಿಯರನ್ನು ಏಕಕಾಲದಲ್ಲಿ ಜಲ ಸ್ತಂಭ ಮಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ
ರಾಷ್ಟ್ರೀಯ ಹೆದ್ದಾರಿಯಲ್ಲೇ ಮೆರವಣಿಗೆ ಸಾಗಿದ್ದರಿಂದ ಸಾವಿರಾರು ಜನ ಪ್ರಮುಖ ಜಂಕ್ಷನ್ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಕೆಲ ಕಡೆ ನಿಧಾನ ಸಂಚಾರ ಕಂಡು ಬಂತು. ಉಡುಪಿ (Udupi) ಜಿಲ್ಲಾ ಪೊಲೀಸರು, ನೂರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಗಳ ವಾಹನ ಸಂಚಾರಕ್ಕೆ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಮೈಸೂರು ದಸರಾ ಮಂಗಳೂರು ದಸರಾ ಸಾಲಿಗೆ ಉಚ್ಚಿಲ ದಸರಾ ಒಂದು ಹೊಸ ಸೇರ್ಪಡೆ ಎಂಬ ಮಾತುಗಳು ಜನರಿಂದ ಕೇಳಿಬಂತು.