ಮೈಸೂರು: ಪ್ರತಿಷ್ಠಿತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಯುಕ್ತ ವೈಮಾನಿಕ ಪ್ರದರ್ಶನ ಅಕ್ಟೋಬರ್ 23 ರಂದು ನಡೆಯಲಿದೆ. ಏರ್ ಶೋನಲ್ಲಿ (Dasara Air Show) ಲೋಹದ ಹಕ್ಕಿಗಳ ಹಾರಾಟದೊಂದಿಗೆ ಸೈನಿಕರ ನಾನಾ ಸಾಹಸಗಳನ್ನು ಜನರು ಕಣ್ತುಂಬಿಕೊಳ್ಳಬಹುದಾಗಿದೆ. ಅ.23ರಂದು ನಡೆಯುವ ಏರ್ ಶೋನ ರಿಹರ್ಸಲ್ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ.
5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಲೋಕದ ಹಕ್ಕಿಗಳ ಆರ್ಭಟ ಶುರುವಾಗುತ್ತಿದ್ದು, ಬಾನಂಗಳದಲ್ಲಿ ಭಾರತೀಯ ವಾಯುಸೇನೆ ಶಕ್ತಿ ಪ್ರದರ್ಶನ ತೋರಲಿದೆ. ಅ.23 ರಂದು (ಸೋಮವಾರ) ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್
Advertisement
Advertisement
ಏರ್ ಶೋನಲ್ಲಿ ವಾಯು ಸೇನೆಯ ನಾನಾ ಯುದ್ಧ ವಿಮಾನಗಳು (Fighter Jets), ಲಘು ವಿಮಾನಗಳು ಭಾಗವಹಿಲಿಸಲಿದ್ದು, ನಾನಾ ಸಾಹಸಗಳನ್ನ ಪ್ರದರ್ಶಿಸಲಿದ್ದಾರೆ. ಜೊತೆಗೆ ವಾಯುಸೇನೆಯ ಯೋಧರು ಪ್ಯಾರಾಚೂಟ್ ಮೂಲಕ ವಿಮಾನದಿಂದ ಜಿಗಿದು ಅಮೋಘ ಸಾಹಸ ಪ್ರದರ್ಶಿಸಲಿದ್ದಾರೆ. ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಿಂದಲೂ ವಿಶೇಷ ಸಾಹಸ ಪ್ರದರ್ಶನ ಇರಲಿದೆ. ಇದನ್ನೂ ಓದಿ: ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ
Advertisement
Advertisement
ಅ.23ರಂದು ನಡೆಯುವ ಏರ್ ಶೋನ ರಿಹರ್ಸಲ್ 22ರಂದು (ಭಾನುವಾರ) ಸಂಜೆ 4 ಗಂಟೆಗೆ ನಡೆಯಲಿದೆ. ರಿಹರ್ಸಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೂರುಗಂಟೆ ಒಳಗೆ ವೀಕ್ಷಣೆಗೆ ಬಂದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಸುಮಾರು 1 ಗಂಟೆಗಳ ಕಾಲ ಸಾಹಸ ಪ್ರದರ್ಶನ ನಡೆಯಲಿದೆ. ಅ.23 ರಂದು ಅದೇ ಪಂಜಿನ ಕವಾಯತು ಮೈದಾನದಲ್ಲಿ ಅಂತಿಮ ಹಂತದ ಏರ್‌ಶೋ ನಡೆಯಲಿದ್ದು, ಪಾಸ್ ಇದ್ದವರಿಗಷ್ಟೇ ವೀಕ್ಷಣೆಗೆ ಅವಕಾಶ ಇರಲಿದೆ. ಇದನ್ನೂ ಓದಿ: ಪಕ್ಷದ ಬಗ್ಗೆ ಬಹಿರಂಗ ಹೇಳಿಕೆ ನೀಡುವಂತಿಲ್ಲ: ನಾಯಕರಿಗೆ ಡಿಕೆಶಿ ಸೂಚನೆ
Web Stories