ಲಂಡನ್: ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಬಾರಿಸಿದ ಚೆಂಡು ಪ್ರೇಕ್ಷಕಿಯ ಬಿಯರ್ ಗ್ಲಾಸ್‍ಗೆ ಬಿದ್ದ ಪ್ರಸಂಗ ನಡೆದಿದೆ.
Advertisement
2ನೇ ದಿನದಾಟದ ಪಂದ್ಯ ನಡೆಯುತ್ತಿತ್ತು. ಒಂದು ಕಡೆ ನ್ಯೂಜಿಲೆಂಡ್ ಬ್ಯಾಟ್ಸ್‌ಮ್ಯಾನ್ ಡೇರಿಲ್ ಮಿಚೆಲ್ ಭರ್ಜರಿ ಹೊಡೆತಗಳ ಮೂಲಕ ಬ್ಯಾಟಿಂಗ್‍ನಲ್ಲಿ ಮಿಂಚುಹರಿಸುತ್ತಿದ್ದರು. 56ನೇ ಓವರ್‌ನಲ್ಲಿ ಡೇರಿಲ್ ಮಿಚೆಲ್ ಲಾಂಗ್‍ಆನ್ ಅತ್ತ ಬಾರಿಸಿದ ಚೆಂಡು ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕಿಯ ಬಿಯರ್ ಗ್ಲಾಸ್ ಒಳಗೆ ಬಿತ್ತು. ಈ ವೇಳೆ ಗ್ಲಾಸ್‍ನಲ್ಲಿದ್ದ ಬಿಯರ್ ಕೆಳಗೆ ಚೆಲ್ಲಿದೆ. ಇದನ್ನು ಗಮನಿಸಿದ ಲಾಂಗ್‍ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ವೇಗಿ ಮ್ಯಾಥ್ಯೂ ಪಾಟ್ಸ್ ಬಿಯರ್ ಗ್ಲಾಸ್‍ಗೆ ಬಾಲ್ ಬಿದ್ದರುವುದನ್ನು ಕೈ ಸನ್ನೆಯ ಮೂಲಕ ಸಹ ಆಟಗಾರರಿಗೆ ತಿಳಿಸಿದರು. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್
Advertisement
View this post on Instagram
Advertisement
ಬಳಿಕ ಬಿಯರ್ ಗ್ಲಾಸ್ ಹಿಡಿದು ಕೂತಿದ್ದ ಸುಸಾನ್ ಹೆಸರಿನ ಪ್ರೇಕ್ಷಕಿಗೆ ನ್ಯೂಜಿಲೆಂಡ್ ತಂಡ ಒಂದು ಪಿಂಟ್ ನೀಡಿದೆ. ಅಲ್ಲದೇ ಸಿಕ್ಸ್ ಬಾರಿಸಿ ಸುಸಾನ್ ಗ್ಲಾಸ್‍ಗೆ ಚೆಂಡು ಬೀಳಿಸಿದ ಡೇರಿಲ್ ಮಿಚೆಲ್ ಸ್ವತಃ ಸುಸಾನ್ ಬಳಿ ಬಂದು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಬಳಿಕ ಈ ವೀಡಿಯೋವನ್ನು ನ್ಯೂಜಿಲೆಂಡ್ ತಂಡ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
Advertisement