ಲಕ್ನೋ: ಮುಸ್ಲಿಂ ಮಹಿಳೆಯರು ಇನ್ನೂ ಮುಂದೇ ಐಬ್ರೊ ಮಾಡಿಸುವಂತಿಲ್ಲ ಹಾಗೂ ಕೂದಲನ್ನು ಕತ್ತರಿಸುವಂತಿಲ್ಲ ಎಂದು ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.
ಆದರೆ ದರುಲ್ ಉಲೂಮ್ ದಿಯೋಬಂದ್ ಉನ್ನತ ಶಿಕ್ಷಣ ಸಂಸ್ಥೆಯ ಶಾಸನಗಳನ್ನು ಪ್ರಕಟಿಸುವ ದರುಲ್ ಇಫ್ತಾ ಈ ಫತ್ವಾವನ್ನು ಟೀಕಿಸಿದೆ.
Advertisement
ಫತ್ವಾದಲ್ಲಿ ಏನಿದೆ?
Advertisement
ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷೇಧಿಸಲಾಗಿದೆ, ಅಲ್ಲದೇ ಇನ್ನೂ ಇಂತಹ ಹತ್ತು ನಿಷೇಧಗಳು ಮಹಿಳೆಯರ ವಿಧಿಸಲಾಗಿದೆ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್‍ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ. ದೇಶಾದ್ಯಂತ ಇತ್ತೀಚೆಗೆ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‍ಗೆ ತೆರಳುವುದು ಅಭ್ಯಾಸವಾಗಿದೆ. ಇದು ಸಾಂಪ್ರದಾಯಿಕ ಮುಸ್ಲಿಂರ ಲಕ್ಷಣವಲ್ಲ. ಇದನ್ನು ಕೂಡಲೇ ನಿಲ್ಲಸಬೇಕು ಎಂದು ತಿಳಿಸಲಾಗಿದೆ.
Advertisement
ಮುಸ್ಲಿಂ ಮಹಿಳೆಯರಿಂದಲೂ ಫತ್ವಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇವರಿಗೆ ಫತ್ವಾ ಹೊರಡಿಸಲು ಯಾವುದೇ ಹಕ್ಕಿಲ್ಲ, ಪ್ರಪಂಚ ಬದಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಾದ ಗಲ್ಫ್ ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಲಾಯಿಸಲು ಅನುಮತಿಯನ್ನು ನೀಡಲಾಗಿದೆ. ಆದರೇ ನಮ್ಮ ದೇಶದಲ್ಲಿ ಇನ್ನೂ ಮಹಿಳೆಯ ಐಬ್ರೊ ಬಗ್ಗೆ ಫತ್ವಾ ಹೊರಡಿಸಲಾಗುತ್ತಿದೆ. ಇದು ನಮ್ಮ ವಿದ್ವಾಂಸರು ಹಾಗೂ ಮೌಲ್ವಿಗಳಿಗೆ ಅವಮಾನ ಎಂದು ತ್ರಿವಳಿ ತಲಾಕ್ ಸಂತ್ರಸ್ತೆ ಸೋಫಿಯಾ ಅಹ್ಮದ್ ಕಿಡಿಕಾರಿದ್ದಾರೆ.
Advertisement
ಈ ಫತ್ವಾ ಇಸ್ಲಾಂ ಪುರುಷರಿಗೂ ಅನ್ವಯವಾಗುತ್ತದೆ, ಇಂದು ಎಷ್ಟು ಜನ ಮುಸ್ಲಿಂ ಪುರುಷರು ಈ ನಿಯಮವನ್ನು ಪಾಲಿಸುತ್ತಿದ್ದಾರೆ ಇಂತಹ ನಕಲಿ ಮೌಲ್ವಿಗಳನ್ನು ಬಿಟ್ಟು, ನಾವು ಎಲ್ಲವನ್ನು ಬುರ್ಕಾದಾಡಿಯಲ್ಲಿ ಮುಚ್ಚಿಡಲು ಯತ್ನಿಸುತ್ತಿದ್ದೇವೆ. ಇಂತಹ ವ್ಯಕ್ತಿಗಳು `ಲಿಪ್‍ಸ್ಪಿಕ್ ಅಂಡರ್ ಮೈ ಬುರ್ಕಾ’ ಸಿನಿಮಾವನ್ನು ಒಮ್ಮೆ ವಿಕ್ಷೀಸಬೇಕು ಎಂದು ಸಾಫಿಯಾ ಬೇಗಂ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.