ಬೆಂಗಳೂರು: ಚಿತ್ರದುರ್ಗ (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಆರೋಪಿಯಾಗಿರುವ ನಟ ದರ್ಶನ್ (Actor Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಇಂದು ಎಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಹೇಳಿಕೆ ದಾಖಲು ಮಾಡುವ ಸಲುವಾಗಿ ಪೊಲೀಸರು ವಿಜಯಲಕ್ಷ್ಮಿಯವರನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಹಾಗೂ ಮನೆಯಲ್ಲಿ ಸಿಕ್ಕ ಶೂ ಬಗ್ಗೆ ಮಾಹಿತಿ ಕೊಡಲು ಕಾಮಾಕ್ಷಿಪಾಳ್ಯ ಪೊಲೀಸರು ವಿಜಯಲಕ್ಷ್ಮಿಅವರಿಗೆ ನೋಟಿಸ್ ನೀಡಿದ್ದರು. ಇಂದು ಬೆಳಗ್ಗೆ ವಿಜಯಲಕ್ಷ್ಮಿಗೆ ಪೊಲೀಸರು ನೀಡಿ ತನಿಖೆಗೆ ಬರುವಂತೆ ಸೂಚಿಸಿದ್ದರು. ಪೊಲೀಸರು ನೋಟಿಸ್ ಕೊಟ್ಟ ಹಿನ್ನೆಲೆಯಲ್ಲಿ ಎಪಿ ನಗರ ಪೊಲೀಸ್ ಠಾಣೆಗೆ ತನಿಖೆಗಾಗಿ ವಿಜಯಲಕ್ಷ್ಮಿಹಾಜರಾಗಿದ್ದು, ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ
Advertisement
Advertisement
ಮನೆಯಲ್ಲಿ ದರ್ಶನ್ ಶೂ ಸಿಕ್ಕ ಬಗ್ಗೆ ವಿಜಯಲಕ್ಷ್ಮಿ ಹೇಳಿಕೆ ದಾಖಲಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಹೊರಟಿದ್ದಾರೆ. ಸುಮಾರು ಐದೂವರೆ ಗಂಟೆಗಳ ಕಾಲ ವಿಜಯಲಕ್ಷ್ಮಿ ಅವರನ್ನು ವಿಚಾರಣೆ ನಡೆಸಿದ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
Advertisement
ರೇಣುಕಾಸ್ವಾಮಿ ಹತ್ಯೆಯ ತನಿಖೆ ನಡೆಸುತ್ತಿರುವ ಪೊಲೀಸರು ಮೊನ್ನೆ ತಡರಾತ್ರಿ ನಟ ದರ್ಶನ್ ಮನೆಯಲ್ಲಿ ಮಹಜರು ನಡೆಸಿದ್ದರು. ಈ ವೇಳೆ ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ಪೊಲೀಸರು ವಶಕ್ಕೆ ಪಡೆದಿದ್ದರು. ಮನೆಯಲ್ಲಿ ಒಗೆಯದೇ ಇಟ್ಟಿದ್ದ ದರ್ಶನ್ ಬಟ್ಟೆ ಹಾಗೂ ಶೂಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಇನ್ನೊಂದೆಡೆ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳನ್ನು ಇಂದು ಮೆಡಿಕಲ್ ಟೆಸ್ಟ್‌ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ‘ಕುರುಕ್ಷೇತ್ರ’ ಸೆಟ್‌ನಲ್ಲಿ ಪವಿತ್ರಾರನ್ನು ಏನೆಂದು ಪರಿಚಯಿಸಿದ್ರು ದರ್ಶನ್? ‘ಕಾಟೇರ’ ನಟ ಹೇಳಿದಿಷ್ಟು
Advertisement
ಇತ್ತ ರೇಣುಕಾಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಪವಿತ್ರಾ ಗೌಡ ಚಪ್ಪಲಿ ಹಾಗೂ ಅಂದು ಧರಿಸಿದ್ದ ಬಟ್ಟೆಯನ್ನು ಕೂಡ ಸೀಜ್ ಮಾಡಲಾಗಿದೆ. ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಹಾಗೂ ಪವಿತ್ರಾಗೆ ಮುಳ್ಳಾಗಿ ಪರಿಣಮಿಸಿದೆ. ಇದನ್ನೂ ಓದಿ: ದರ್ಶನ್ ಸೇರಿ ಆರೋಪಿಗಳಿಗೆ DNA ಪರೀಕ್ಷೆ- ವಿಕ್ಟೋರಿಯಾದಲ್ಲಿ ಹೆಲ್ತ್ ಚೆಕಪ್