ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ (Actor Darshan) ಅವರ ಪುತ್ರ ವಿನೀಶ್ (Vinish), ತಂದೆಯನ್ನು ನೆನೆದು ತಮ್ಮ ಇನ್‌ಸ್ಟಾಗ್ರಾಮ್ (Instagram Post) ಖಾತೆಯಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ನಾನು 15 ವರ್ಷದ ಹುಡುಗನಿದ್ದೇನೆ. ನನಗೂ ಮನಸ್ಸಿದೆ, ಭಾವನೆಗಳಿವೆ ಅನ್ನೋದನ್ನ ಪರಿಗಣಿಸದೇ ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಆಕ್ಷೇಪಾರ್ಹ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದಗಳು. ನನ್ನ ತಂದೆ ಮತ್ತು ತಾಯಿಯ ಬೆಂಬಲದ ಅಗತ್ಯವಿರುವ ಈ ಕಷ್ಟದ ಸಮಯದಲ್ಲಿಯೂ ನನ್ನನ್ನು ಶಪಿಸುವುದರಿಂದ ನೀವು ಬದಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ನಟರೂ ಆಗಿರುವ ಆರೋಪಿ ದರ್ಶನ್ ತೂಗುದೀಪ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪ ಪ್ರಕರಣದಲ್ಲಿ ಕೆಲ ಪ್ರಭಾವಿಗಳು ದರ್ಶನ್ ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಫನ್ ಕರೆಗಳನ್ನು ಮಾಡಿ ಒತ್ತಡ ಹೇರುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದನ್ನೂ ಓದಿ: ಏನಿದು ಬಿಎಸ್‌ವೈ ವಿರುದ್ಧದ ಪೋಕ್ಸೊ ಕೇಸ್? – ಇಲ್ಲಿದೆ ನೋಡಿ ಟೈಮ್‌ಲೈನ್..
ಈ ಬೆನ್ನಲ್ಲೇ ದರ್ಶನ್ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನಡೆಗೆ ಬಿಜೆಪಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ. ನಾವು ಎಲ್ಲಿದೀವಿ? ಪಾಕಿಸ್ತಾನದಲ್ಲಿ ಇದೀವಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಮಾಧ್ಯಮ ನಿರ್ಬಂಧ, ಮಾಧ್ಯಮದವರ ಮೇಲಿನ ಹಲ್ಲೆ ಖಂಡನೀಯ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಪೊಲೀಸ್ ಠಾಣೆ ಬಳಿ ನಿಷೇಧಾಜ್ಞೆ ವಿಧಿಸಿದ್ದನ್ನು ಪಿ.ರಾಜೀವ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯಿಂದ ರಾಜ್ಯ ಸರ್ಕಾರ ಮುಜುಗರಕ್ಕೀಡಾಗಿದೆ. ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಗೃಹ ಸಚಿವ ಪರಮೇಶ್ವರ್ ಹಿಂದೇಟು ಹಾಕಿದ್ದಾರೆ. ಅಭಿಮಾನಿಗಳು ಹೆಚ್ಚು ಬರಬಹುದು ಅಂತ ಪೊಲೀಸ್ರು ಹಾಗೆ ಮಾಡಿರಬಹುದು ಎಂದು ಡಿಸಿಎಂ ಹೇಳಿದ್ದಾರೆ. ಸಚಿವ ಹೆಚ್.ಕೆ ಪಾಟೀಲ್ ಮಾತ್ರ, ಇಂತಹ ಸ್ಥಿತಿ ಯಾಕೆ ಬಂತೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ