ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಅವರ ಸ್ನೇಹಿತ ಆಂಟೋನಿ ಭವಿಷ್ಯ ನಿರ್ಧಾರವಾಗಲಿದೆ.
ಆರ್ ಟಿಓ ಹಾಗೂ ಬ್ರೇಕ್ ಇನ್‍ಸ್ಪೆಕ್ಟರ್ ವರದಿಗಳು ಇಂದು ಸಂಚಾರಿ ಪೊಲೀಸರ ಕೈ ಸೇರಲಿದೆ. ಈ ವರದಿಯಲ್ಲಿ ಅಪಘಾತದ ನಿಖರ ಕಾರಣ ಸ್ಪಷ್ಟವಾಗಲಿದೆ. ಕಾರಿನಲ್ಲಿ ದೋಷ ಇಲ್ಲ ಎಂದಾದರೆ ಆಂಟೋನಿ ಈ ಕೇಸ್‍ನಲ್ಲಿ ತಳುಕು ಹಾಕಿಕೊಳ್ಳುವುದು ಖಂಡಿತ ಎಂದು ಹೇಳಲಾಗುತ್ತಿದೆ.
Advertisement
Advertisement
ಈಗಾಗಲೇ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆ ಎಂದು ದರ್ಶನ್ ತಮ್ಮ ಡ್ರೈವರ್ ಲಕ್ಷ್ಮಣ್ ಮೂಲಕ ದೂರು ನೀಡಿದರು. ಒಂದು ವೇಳೆ ಕಾರಿನಲ್ಲಿ ತಾಂತ್ರಿಕ ದೋಷ ಇದ್ದರೆ ಮಾತ್ರ ಆಂಟೋನಿ ಬಚಾವ್. ಸದ್ಯ ಆರ್ ಟಿಓ ವರದಿ ಈ ಅಪಘಾತದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾರಿನ ಶಕ್ತಿ, ಇಂಜಿನ್ ಆಯಸ್ಸು, ಬ್ರೇಕ್ ಮತ್ತು ಕ್ಲಚ್ ಪರಿಶೀಲನೆ ನಡೆಸಿ ವರದಿ ನೀಡಲಿದೆ.
Advertisement
ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇಫ್ ಆಗಿದ್ದು, ತನ್ನ ಸ್ನೇಹಿತನ ವಿರುದ್ಧವೇ ದೂರು ದಾಖಲಿಸಿದರು ಎಂದು ಹೇಳಲಾಯಿತು. ಪ್ರಕರಣದಲ್ಲಿ ರಾಯ್ ಆಂಟೋನಿ ಮಾತ್ರ ಏಕೈಕ ಆರೋಪಿಯಾಗಿದ್ದು, ಸ್ನೇಹಿತನ ವಿರುದ್ಧವೇ ದರ್ಶನ್ ಖಾಸಗಿ ಗನ್‍ಮ್ಯಾನ್ ಮತ್ತು ಡ್ರೈವರ್ ಆಗಿರುವ ಲಕ್ಷ್ಮಣ್ ಮೂಲಕ ದೂರು ಕೊಡಿಸಿದ್ದಾರೆ. ಲಕ್ಷ್ಮಣ್ ನೀಡಿದ ದೂರಿನ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
Advertisement
ದೂರಿನಲ್ಲಿ ಏನಿದೆ?
ಸೋಮವಾರ ಬೆಳಗ್ಗಿನ ಜಾವ ಸುಮಾರು 2.30 ಗಂಟೆ ಕಾರಿನ ಚಾಲಕ ರಾಯ್ ಆಂಟೋನಿ ಅವರು ಕಾರಿನಲ್ಲಿ ನಟರಾದ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರನ್ನು ಕೂರಿಸಿಕೊಂಡು ರಿಂಗ್ ರಸ್ತೆ ಜಂಕ್ಷನ್ ತಿರುವಿನಲ್ಲಿ ಕಾರನ್ನು ನಿರ್ಲಕ್ಷ್ಯತೆ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಇದರಿಂದ ದರ್ಶನ್ ಅವರ ಬಲಗೈ ಮೂಳೆ ಮುರಿದಿದೆ. ಅಲ್ಲದೇ ದೇವರಾಜ್ ಅವರ ಎದೆಯ ಭಾಗ ಹಾಗೂ ಎಡಗೈ ಬೆರಳಿಗೆ ಪೆಟ್ಟಾಗಿದ್ದು, ಪ್ರಜ್ವಲ್ ಅವರಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ಸದ್ಯ ಮೂವರು ನಟರು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪಘಾತದ ವಿಚಾರ ತಿಳಿದು ನಾನು ಆಸ್ಪತ್ರೆಗೆ ಬಂದು ಗಾಯಗೊಂಡಿದ್ದ ನಟರನ್ನು ನೋಡಿದೆ. ಹೀಗಾಗಿ ಈ ಅಪಘಾತಕ್ಕೆ ಕಾರಣನಾದ ಕಾರು ಚಾಲಕ ರಾಯ್ ಆಂಟೋನಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಆದರೆ ಈಗ ಈ ಘಟನೆಗೆ ಸಂಬಂಧಿಸಿದಂತೆ ನಾನು ಆಂಟೋನಿ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ದರ್ಶನ್ ಅವರ ಗನ್‍ಮ್ಯಾನ್ ಹಾಗೂ ಡ್ರೈವರ್ ಲಕ್ಷ್ಮಣ್ ಹೇಳಿದ್ದಾರೆ. ಹಾಗಾದರೆ ಆಂಟೋನಿ ವಿರುದ್ಧ ದೂರು ನೀಡಿದ ವ್ಯಕ್ತಿ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ ಎಫ್‍ಐಆರ್ ನಲ್ಲಿ ಪಿರ್ಯಾದುದಾರರ ಹೆಸರು ಲಕ್ಷ್ಮಣ್ ಅಂತಾನೇ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv