ಇದೇ ವಾರ ಮುಗಿಯಲಿದೆ ದರ್ಶನ್ ಡೆವಿಲ್ ಶೂಟಿಂಗ್ !

Public TV
1 Min Read
Darshan Devil Cinema 1

ಟ ದರ್ಶನ್ ಪ್ರಸ್ತುತ `ಡೆವಿಲ್’ ಸಿನಿಮಾದ (Devil Cinema) ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಕಳೆದ ತಿಂಗಳೇ `ಡೆವಿಲ್’ ಚಿತ್ರದ ಟಾಕಿ ಭಾಗದ ಚಿತ್ರೀಕರಣಕ್ಕೆ ಫುಲ್‌ಸ್ಟಾಪ್ ಬಿದ್ದಿತ್ತು. ದರ್ಶನ್ (Darshan) ಕನ್ವರ್‌ಲಾಲ್ ಗೆಟಪ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಟಾಕಿ ಮುಕ್ತಾಯವಾಗಿದ್ದ ವಿಷಯ ಘೋಷಿಸಿತ್ತು `ಡೆವಿಲ್’ ತಂಡ. ಇದೀಗ ಬಾಕಿ ಉಳಿದಿರುವ ಎರಡು ಹಾಡಿನ ಚಿತ್ರೀಕರಣಲ್ಲಿ ಒಂದು ಹಾಡನ್ನ ಇದೇ ವಾರ ಚಿತ್ರೀಕರಿಸಿಕೊಳ್ಳಲಿರುವ ತಂಡ ಬಾಕಿ ಉಳಿದಿರುವ ಫೈಟ್‌ಸೀನ್ ಚಿತ್ರೀಕರಣವನ್ನೂ ಇದೇ ವಾರವೇ ಮುಗಿಸಲಿದೆ.

Darshan Devil Cinema

ಸೋಮವಾರದಿಂದ ಸಾಹಸ ದೃಶ್ಯವೊಂದರ ಚಿತ್ರೀಕರಣ ಬಳಿಕ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಬಾಕಿ ಉಳಿದಿರುವ ಇನ್ನೊಂದು ಹಾಡನ್ನ ವಿದೇಶದಲ್ಲಿ ಚಿತ್ರೀಕರಿಸಿಕೊಳ್ಳಲು ಪ್ಲ್ಯಾನ್ ರೆಡಿಯಾಗಿದ್ದು‌, ಮುಂದಿನ ತಿಂಗಳು ಮೊದಲ ವಾರದಲ್ಲೇ ದರ್ಶನ್ ವಿದೇಶ ಪ್ರಯಾಣ ಬೆಳೆಸಲಿದ್ದಾರೆ. ವಿದೇಶಕ್ಕೆ ತೆರಳಲು ಈಗಾಗ್ಲೇ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವ ದರ್ಶನ್, ಜುಲೈ ಮೊದಲ ವಾರದಲ್ಲಿ ಡೆವಿಲ್ ಹಾಡಿನ ಚಿತ್ರೀಕರಣಕ್ಕಾಗಿ ತಂಡದ ಜೊತೆ ಯುರೋಪ್ ದೇಶಗಳಿಗೆ ತೆರಳಲಿದ್ದಾರೆ. ಬಹುಶಃ ಸ್ವಿಜ್ಡರ್‌ಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ದುಬೈಗೂ ತೆರಳುವ ಸಂಭವ ಇದೆ.

Devil 2

ಕೊಲೆ ಆರೋಪದಡಿ ಜೈಲು ಸೇರಿದ್ದ ದರ್ಶನ್ ಅಲ್ಪ ಶೂಟಿಂಗ್ ಆಗಿ ನಿಂತುಹೋಗಿದ್ದ `ಡೆವಿಲ್’ ಚಿತ್ರದ ಚಿತ್ರೀಕರಣವನ್ನ ಇದೀಗ ಸಂಪೂರ್ಣವಾಗಿ ಮುಗಿಸಿಕೊಟ್ಟಿದ್ದಾರೆ. ಮಾರ್ಚ್ ಕೊನೆಯ ವಾರದಿಂದ `ಡೆವಿಲ್’ ಚಿತ್ರೀಕರಣ ಮರು ಪ್ರಾರಂಭವಾಗಿತ್ತು. ಇದೀಗ ಜೂನ್ ಅಂತ್ಯದಲ್ಲಿ `ಡೆವಿಲ್’ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದೆ. ಶೀಘ್ರದಲ್ಲೇ `ಡೆವಿಲ್’ ಟೀಮ್, ರಿಲೀಸ್ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

Share This Article