– ನಾಳೆ ಲಕ್ವ ಹೊಡೀತು ಅಂತಾರೆ ಎಂದು ಎಸ್‌ಪಿಪಿ ಆಕ್ಷೇಪ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ (Darshan) ರೆಗ್ಯುಲರ್ ಬೇಲ್ ಸಿಗುವ ವಿಚಾರದಲ್ಲಿ ಮತ್ತೆ ನಿರಾಸೆಯಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ (Karnataka Highcourt) ಡಿ.9ಕ್ಕೆ (ಸೋಮವಾರ) ಮುಂದೂಡಿದೆ.
ಕೊಲೆ ಆರೋಪಿ ದರ್ಶನ್, ಪವಿತ್ರಾಗೌಡ (Pavitra Gowda), ಪ್ರದೋಷ್ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಾಯಿತು. ಎಸ್‌ಪಿಪಿ ವಾದ ಮಂಡನೆ ಮಾಡಿದ ಬಳಿಕ ನ್ಯಾಯಮೂರ್ತಿಗಳು ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿದರು. ಅಲ್ಲದೇ ಮಧ್ಯಂತರ ಜಾಮೀನು ಅರ್ಜಿ ವಜಾ ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಕೋರ್ಟ್ ಮುಂದೂಡಿತು. ಇದನ್ನೂ ಓದಿ: ಕಾರ್ಕಳದ ಯುವತಿ ಅತ್ಯಾಚಾರ ಕೇಸ್ – ಪ್ರಮುಖ ಆರೋಪಿ ಅಲ್ತಾಫ್‌ಗೆ ಜಾಮೀನು ಮಂಜೂರು
ವಿಚಾರಣೆ ಆರಂಭವಾಗುತ್ತಿದ್ದಂತೆ ಮೊದಲು ಪ್ರದೋಷ್ ಪರ ವಕೀಲರು ವಾದ ಮಂಡಿಸಿದರು. ಈ ವೇಳೆ ದರ್ಶನ್‌ನಿಂದ 30 ಲಕ್ಷ ರೂ. ಪಡೆದ ಆರೋಪ ಇದೆ. ಸರೆಂಡರ್ ಆಗುವವರಿಗೆ ಹಾಗೂ ಪೊಲೀಸರಿಗೆ ಹಣ ನೀಡಲು ಪಡೆಯಲಾಗಿದೆ ಎಂಬ ಆರೋಪ ಇದೆ. ಕೊಲೆ ನಡೆದ ಸ್ಥಳದಲ್ಲಿ ಪ್ರದೂಷ್ ಇರಲಿಲ್ಲವೇ ಎಂದು ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲರು, ಇಡೀ ಆರೋಪದಲ್ಲಿ ಪ್ರದೂಷ್ ಭಾಗಿಯಾಗಿಲ್ಲ. ದರ್ಶನ್, ಪವಿತ್ರಾಗೌಡ ಜೊತೆ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದ್ರೆ ಪ್ರದೋಷ್‌ನದ್ದು ಏನೂ ಪಾತ್ರವಿಲ್ಲ. ಸಾಕ್ಷಿ ಪುನೀತ್ ಪ್ರಕಾರ ಪ್ರದೂಷ್ ಮೆಸೆಜ್‌ಗಳನ್ನ ಮಾತ್ರ ಓದಿದ್ದ ಎಂದರು. ಇದಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್ ಆಕ್ಷೇಪಣಾ ವಾದ ಮಂಡಿಸಿದರು.
ಮಧ್ಯಂತರ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿದರು. ದರ್ಶನ್‌ಗೆ ತಕ್ಷಣವೇ ಜಾಮೀನು ಬೇಕು ಅಂತ ಪಡೆದ್ರು. ಇಲ್ಲದೇ ಹೋದರೆ ಲಕ್ವ ಹೊಡೆಯುತ್ತೆ ಅಂದರು, ಈಗಾಗಲೇ 2 ರಿಪೋರ್ಟ್ ಕೊಟ್ಟಿದ್ದಾರೆ. ಆ ಎರಡು ರಿಪೋರ್ಟ್‌ಗಳನ್ನ ಕೋರ್ಟ್ ಗಮನಕ್ಕೆ 6-11ಕ್ಕೆ ಒಂದು ರಿಪೋರ್ಟ್ ನೀಡಿದ್ದಾರೆ. ಆ ವರದಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗ್ತಿದೆ ಅಂತ ಹೇಳ್ತಿದ್ದಾರೆ. 20 ದಿನದ ಬಳಿಕ ರಿಪೋರ್ಟ್ ಅಲ್ಲಿ ಬಿಪಿ ಏರಿಳಿತಗಳು ಆಗ್ತಾ ಇದೆ ಅಂತ ವರದಿ ನೀಡಿದ್ದಾರೆ. ಮತ್ತೆ ಅವರಿಗೆ ಶಸ್ತ್ರಚಿಕಿತ್ಸೆಗೆ ತಯಾರಿ ಮಾಡಲಾಗ್ತಾ ಇದೆ ಅಂತಾರೆ, ಯಾವುದೇ ರೋಗಿ Amlong 50 ಎಂಜಿ ತಕ್ಕೊಂಡ್ರೆ, 24 ಗಂಟೆಯಲ್ಲಿ ಬಿಪಿ ನಾರ್ಮಲ್‌ಗೆ ಬರುತ್ತೆ. ಅನಸ್ತೇಶಿಯಾ ಕೊಡುವಾಗ ನಿಯಂತ್ರಣಕ್ಕೆ ತರ್ತಾರೆ. ಆದ್ರೆ ಇಲ್ಲಿ ಸಿನಿಮಾದಲ್ಲಿ ಮಾಡೋ ಹಾಗೇ ಮಾಡ್ತಿದ್ದಾರೆ. ತಲೆ ಬಾಚ್ಕೊಳಿ, ಪೌಡರ್ ಹಾಕೊಳಿ ಅನ್ನೋ ಹಾಗೇ ತಯಾರಿ ಮಾಡ್ತಾ ಇದ್ದಾರೆ. ಮಧ್ಯಂತರ ಜಾಮೀನು ದುರ್ಬಳಕೆ ಮಾಡ್ಕೊಂಡಿದ್ದಾರೆ. ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತೆ ಅಂತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈಗ ಇನ್ನೂ ಅಪರೇಷನ್ ಮಾಡಿಲ್ಲ, ಆದ್ದರಿಂದ ಜಾಮೀನು ರದ್ದು ಮಾಡಬೇಕು ಅಂತ ಮನವಿ ಮಾಡ್ತೀನಿ ಎಂದರು. ಆಗ ಜಡ್ಜ್ ಯಾವಾಗ ಮುಗಿಯುತ್ತೆ ಜಾಮೀನು ಅವಧಿ ಅಂತ ಪ್ರಶ್ನೆ ಮಾಡಿದ್ರು, ಅದಕ್ಕೆ ಮುಂದಿನವಾರ ಮುಕ್ತಾಯ ಆಗುತ್ತೆ ಅಂತ ಎಸ್‌ಪಿಪಿ ಹೇಳಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಸಿ.ವಿ ನಾಗೇಶ್ ಆಪರೇಷನ್‌ಗೆ ದಿನಾಂಕ ನಿಗದಿ ಆಗಿದೆ ಎಂದರು, ಈ ವೇಳೆ ಎಸ್‌ಪಿಪಿ ಯಾವಾಗ ಮಾಡಿಸ್ತೀನಿ ಅಂದರು? ಅಕ್ಕೆ ನಾಗೇಶ್ ಅದನ್ನ ಕೋರ್ಟ್‌ಗೆ ಹೇಳ್ತೀನಿ ಅಂದರು.
ಬಳಿಕ ರೆಗ್ಯೂಲರ್ ಜಾಮೀನು ಅರ್ಜಿಗೆ ಆಕ್ಷೇಪಣೆ ವಾದ ಪ್ರಾರಂಭಿಸಿದ ಎಸ್ಪಿಪಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವನ್, ಪದ್ರೋಷ್ ಪಾತ್ರವನ್ನು ವಿವರಿಸಿದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಸೋಮವಾರಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿತು. ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರತಂಡಕ್ಕೆ ರಿಲೀಫ್ – ನಿರ್ಮಾಪಕರ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ