ಇಂದು ಜೈಲಾಧಿಕಾರಿಗಳ ಕೈ ಸೇರಲಿದೆ ದರ್ಶನ್ ಬೆನ್ನು ನೋವಿನ ಮೆಡಿಕಲ್ ರಿಪೋರ್ಟ್

Public TV
1 Min Read
Darshan 2

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಎರಡನೇ ಆರೋಪಿ ದರ್ಶನ್ (Darshan) ಬೆನ್ನು ನೋವಿಗೆ ಸಂಬಂಧಿಸಿದ ಮೆಡಿಕಲ್ ರಿಪೋರ್ಟ್ ಇಂದು ಜೈಲು ಅಧಿಕಾರಿಗಳ ಕೈ ಸೇರಲಿದೆ.

ಬಳ್ಳಾರಿ (Ballari) ವಿಮ್ಸ್ ವೈದ್ಯರು ತಪಾಸಣೆ ಮಾಡಿರುವ ಮೆಡಿಕಲ್ ರಿಪೋರ್ಟ್ ನಿನ್ನೆಯೇ ಸಲ್ಲಿಕೆಯಾಗಬೇಕಿತ್ತು. ಆದರೆ ಅರ್ಥೋಪೆಡಿಕ್ ವೈದ್ಯರು ಇರದ ಹಿನ್ನೆಲೆ ರಿಪೋರ್ಟ್ ಇಂದು ಸಲ್ಲಿಕೆಯಾಗಲಿದೆ. ಇದನ್ನೂ ಓದಿ: ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನ ಅಭಿಯಾನವನ್ನು ನಿಲ್ಲಿಸಿ ಎಂದಿದ್ದ ರತನ್‌ ಟಾಟಾ

ದರ್ಶನ್‌ಗೆ ಐ1 ಮತ್ತು ಐ5 ನಲ್ಲಿ ಊತ ಕಾಣಿಸಿಕೊಂಡು, ಬೆನ್ನು ನೋವಿನಿಂದ ಒದ್ದಾಡುತ್ತಿದ್ದಾರೆ. ಈಗಾಗಲೇ ವೈದ್ಯರು ಸ್ಕ್ಯಾನಿಂಗ್ ಮಾಡಿಸಿ ಎಂದು ಹೇಳಿದ್ರೂ ಆರೋಪಿ ದರ್ಶನ್ ಮೊಂಡುತನ ಮಾಡ್ತಿದ್ದಾರೆ. 15ನೇ ತಾರೀಖಿನ ಒಳಗಾಗಿ ಸರ್ಜರಿ ಮಾಡಿಸಿದ್ರೆ ಒಳ್ಳೆಯದು ಎಂದು ವೈದ್ಯರು ಈಗಾಗಲೇ ಸಲಹೆಯನ್ನೂ ಕೊಟ್ಟಿದ್ದಾರೆ. ಮತ್ತೊಂದೆಡೆ ಬೆನ್ನು ನೋವಿನಿಂದ ಒದ್ದಾಡಿರುವ ಆರೋಪಿ ದರ್ಶನ್ ರಾತ್ರಿ ಇಡೀ ಜೈಲಿನಲ್ಲಿ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ ಎನ್ನಲಾಗ್ತಿದೆ. ಇದರ ನಡುವೆ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿ ಅವರಿಗೆ ಭೇಟಿಯಾಗಲಿ ಹೇಳಿದ್ರಿಂದ ಸಂಜೆ 4ಗಂಟೆ ಬಳಿಕ ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮೊದಲ ಉದ್ಯಮದಲ್ಲೇ ಯಶಸ್ಸು ಕಂಡಿದ್ದ ಉದ್ಯಮ ಸಾಮ್ರಾಟ

Share This Article