ಮೈಸೂರು: ಬೆನ್ನು ನೋವಿನಿಂದ (Back Pain) ಬಳಲುತ್ತಿರುವ ನಟ ದರ್ಶನ್‌ಗೆ (Darshan) ಕಳೆದ ವಾರ ಮೈಸೂರಿನ (Mysuru) ವೈದ್ಯ ಡಾ. ಅಜಯ್ ಹೆಗ್ಡೆ ನೀಡಿದ್ದ ಎಪಿಡ್ಯೂರಲ್ ಇಂಜೆಕ್ಷನ್ ವರ್ಕ್ ಆಗಿದೆ. ಹೀಗಾಗಿ ಕೊಲೆ ಆರೋಪಿ ದರ್ಶನ್‌ಗೆ ಸದ್ಯಕ್ಕೆ ಆಪರೇಷನ್ ಅವಶ್ಯಕತೆ ಇಲ್ಲ. ನಾನು ಮೊದಲಿಗಿಂತಲೂ ಚೆನ್ನಾಗಿದ್ದೇನೆ ಎಂದು ವೈದ್ಯರಿಗೆ ದರ್ಶನ್ ದೂರವಾಣಿ ಮೂಲಕ ಹೇಳಿದ್ದಾರೆ.
ಕಳೆದ ವಾರ ಕೊಟ್ಟ ಇಂಜೆಕ್ಷನ್‌ನಿಂದ ದರ್ಶನ್ ಬೆನ್ನು ನೋವಿನಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಬಹುತೇಕ ಇಂಜೆಕ್ಷನ್‌ನಿಂದಲೇ ನೋವು ನಿವಾರಣೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈಗಾಗಲೇ ಪ್ರತಿನಿತ್ಯ ವರ್ಕೌಟ್ ಶುರು ಮಾಡಿರುವ ದರ್ಶನ್ ಫುಲ್ ಬಾಡಿ ವರ್ಕೌಟ್ ಶುರು ಮಾಡಿದ ನಂತರ ಏನಾದರು ನೋವು ಕಾಣಿಸಿಕೊಂಡರೆ ಮತ್ತೆ ಪರೀಕ್ಷೆಗೆ ಒಳಪಡಲಿದ್ದಾರೆ. ಇದನ್ನೂ ಓದಿ: ಬಣಗಳ ಗುದ್ದಾಟ – ರಾಮುಲು, ರೆಡ್ಡಿ ಗಲಾಟೆ | ಕಡೆಗೂ ಆರ್‌ಎಸ್‌ಎಸ್ ಎಂಟ್ರಿ
ಫೆಬ್ರವರಿಯಿಂದ ಶೂಟಿಂಗ್‌ನಲ್ಲಿ ನಿರಂತರವಾಗಿ ಭಾಗವಹಿಸುವ ನಟ ದರ್ಶನ್ ದೇಹವನ್ನು ಮೊದಲಿನ ರೀತಿ ತರಲು ವರ್ಕೌಟ್‌ಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆಯಂತೆ ಮತ್ತೆ ಎಂದಿನ ಶೈಲಿಯಲ್ಲೇ ದರ್ಶನ್ ನಿಧಾನವಾಗಿ ಜಿಮ್‌ನಲ್ಲಿ ಕಸರತ್ತು ಆರಂಭಿಸಿದ್ದಾರೆ. ಇದನ್ನೂ ಓದಿ: 50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ