ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ವಿಚಾರವಾಗಿ ಅರೆಸ್ಟ್ ಆಗಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಪತ್ನಿ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ನಿಧನಕ್ಕೆ ವಿಜಯಲಕ್ಷ್ಮಿ (Vijayalakshmi) ಪತ್ನಿ ಸಂತಾಪ ಸೂಚಿಸಿದ್ದಾರೆ.
ದರ್ಶನ್ ಅರೆಸ್ಟ್ ಆದ ಬಳಿಕ ವಿಜಯಲಕ್ಷ್ಮಿ ಸೈಲೆಂಟ್ ಆಗಿದ್ರೂ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಹೇಳಿಕೆ ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಮೃತ ರೇಣುಕಾಸ್ವಾಮಿಗೆ ಸಂತಾಪವನ್ನು ಸೂಚಿಸುತ್ತೇನೆ. ನನ್ನ ಹದಿಹರೆಯದ ಮಗ ಹಾಗೂ ಕುಟುಂಬಕ್ಕೆ ದುಃಖ ತಂದಿದೆ. ಇದನ್ನೂ ಓದಿ:ಸೂರ್ಯ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ಪೂಜಾ ಹೆಗ್ಡೆ
View this post on Instagram
ನನ್ನ ಹಾಗೂ ನನ್ನ ಮಗನ ವಿರುದ್ಧ ಸುಳ್ಳು ಮಾಹಿತಿ ಹಾಗೂ ಅಸತ್ಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದನ್ನು ತಡೆಯಬೇಕಾಗಿದೆ. ಅಧಿಕೃತ ಪ್ರಕಟಣೆಯನ್ನು ಮಾತ್ರ ಪ್ರಕಟಿಸುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ತಾಯಿ ಚಾಮುಂಡೇಶ್ವರಿ ಹಾಗೂ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯವು ಮೇಲುಗೈ ಸಾಧಿಸಲಿ. ‘ಸತ್ಯಮೇವ ಜಯತೆ’ ಎಂದು ದರ್ಶನ್ ಪತ್ನಿ ಬರೆದುಕೊಂಡಿದ್ದಾರೆ.
ಅಂದಹಾಗೆ, ದರ್ಶನ್ ಮತ್ತು ವಿಜಯಲಕ್ಷ್ಮಿ 2003ರಲ್ಲಿ ಮದುವೆಯಾದರು. ಈ ಜೋಡಿಗೆ ವಿನೀಶ್ ಎಂಬ ಮಗನಿದ್ದಾನೆ.