– ಕೋರ್ಟ್ ಆದೇಶ ಬರುವವರೆಗೂ ಚೇರ್ ಕೊಡದಿರಲು ನಿರ್ಧಾರ
ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೇ ಬೇಡಿಕೆ ಇಡುತ್ತಿರುವ ದರ್ಶನ್ ಇದೀಗ ಚೇರ್‌ಗೆ ಬೇಡಿಕೆ ಇಟ್ಟಿದ್ದು, ದರ್ಶನ್ ಬೇಡಿಕೆಗೆ ಜೈಲಧಿಕಾರಿಗಳು ತಣ್ಣೀರು ಎರಚಿದ್ದಾರೆ.
Advertisement
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದ ಕೊಲೆ ಆರೋಪಿ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್ ಜೈಲು (Ballary Central Jail) ನರದಕರ್ಶನ ಮಾಡಿಸುತ್ತಿದೆ. ಮ್ಯಾನುವಲ್ ಬಿಟ್ಟು ಹೆಚ್ಚುವರಿಯಾಗಿ ಅದೇನೇ ಬೇಡಿಕೆ ಇಟ್ಟರೂ ಜೈಲಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಜಿಕಲ್ ಕಮೋಡ್, ವಿಟಮಿನ್ ಟ್ಯಾಬ್ಲೇಟ್ ಹಾಗೂ ಟಿವಿ ಬಳಿಕ ಇದೀಗ ಕುಳಿತುಕೊಳ್ಳೋಕೆ ಚೇರ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ದರ್ಶನ್‌ಗೆ ಜೈಲಧಿಕಾರಿಗಳು ನಿಜ ಜೈಲು ಹೇಗಿರುತ್ತದೆ ಎಂಬ ರುಚಿಯನ್ನು ತೋರಿಸುತ್ತಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಾಣಭಿಕ್ಷೆಗೆ ಅಂಗಲಾಚುತ್ತಿರೋದು ‘ಎಐ’ ಫೋಟೊ? – ಆರೋಪಿ ಮೊಬೈಲ್ ಮತ್ತೆ FSL ಪರೀಕ್ಷೆಗೆ
Advertisement
Advertisement
ಆರೋಪಿ ದರ್ಶನ್ (Actor Darshan) ಎಂತಹ ದೊಡ್ಡ ಸ್ಟಾರ್ ಆಗಿದ್ದರೂ ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ಅವರನ್ನು ಸ್ಟ್ರಿಕ್ಟ್ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಆದ ಕಾರಣ ದರ್ಶನ್ ಜೈಲಿನ ಮ್ಯಾನುವಲ್ ಪ್ರಕಾರವೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಯಾವುದೂ ಸುಲಭವಾಗಿ ಸಿಗದೇ ಇರುವ ಕಾರಣಕ್ಕೆ ಒಂದೊಂದೇ ಬೇಡಿಕೆಯನ್ನ ಜೈಲಧಿಕಾರಿಗಳ ಮುಂದೆ ಇಡುತ್ತಿದ್ದಾರೆ.
Advertisement
ಜೈಲಧಿಕಾರಿಗಳು ಟಿವಿ ನೀಡಿದ ಬಳಿಕ ವಿಟಮಿನ್ ಟ್ಯಾಬ್ಲೇಟ್ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆರೋಪಿ ದರ್ಶನ್ ಚೇರ್ ಬೇಡಿಕೆ ಇಟ್ಟ ಬಳಿಕ ಜೈಲಧಿಕಾರಿಗಳು ಚೇರ್ ಕೊಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ನಿನ್ನೆ (ಸೆ.17) ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ಆಗಿದ್ದರಿಂದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಆ ವೇಳೆ ಆರೋಪಿ ದರ್ಶನ್ ಪರ ವಕೀಲರು ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂಡುವುದಕ್ಕೂ ಅಗುತ್ತಿಲ್ಲ. ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕೆ ಜೈಲಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಎಲ್ಲ ವ್ಯವಸ್ಥೆ ಇದೆ. ಎನ್‌ಐಎ ಕೇಸ್‌ನಲ್ಲಿರುವ ಆರೋಪಿಗಳಿಗೆ ವ್ಯವಸ್ಥೆ ಇದೆ. ಆದರೆ ದರ್ಶನ್‌ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ. ಫುಲ್ ಹೈ ಸೆಕ್ಯೂರಿಟಿ ಎಂದು ಹೇಳುತ್ತಾರೆ. ಸರಿಯಾದ ವ್ಯವಸ್ಥೆ ಕೂಡ ಸಿಗುತ್ತಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಧಿಕಾರಿಗಳು ವಿರುದ್ಧ ಮಾರುದ್ದ ಆರೋಪ ಮಾಡಿದ್ದರು.
ಆರೋಪಿ ದರ್ಶನ್ ಜೈಲಿನಲ್ಲಿ ಚೇರ್ ಕೇಳೇ ಇಲ್ಲವಂತೆ. ಬೆನ್ನು ನೋವಿದೆ ಎಂದು ಒಂದು ದಿಂಬನ್ನು ಕೇಳಿದ್ದರು. ಜೈಲು ಮ್ಯಾನುಯಲ್ ಪ್ರಕಾರ ಇದ್ದರೆ ಕೊಡುತ್ತಾರೆ ಅಂದಿದ್ದರು. ಆದರೆ ಜೈಲಿನ ಮ್ಯಾನುವಲ್ ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಜೈಲಧಿಕಾರಿಗಳು ದಿಂಬನ್ನು ಕೊಟ್ಟಿಲ್ಲ. ಚೇರ್ ಕೊಡುವ ಬಗ್ಗೆ ಕೋರ್ಟ್ ಆದೇಶ ಮಾಡಿದರೆ ಮಾತ್ರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಳ್ಳಾರಿ ಜೈಲಿನ ಮೂಲಗಳ ಪ್ರಕಾರ ಮಾಹಿತಿ ತಿಳಿದು ಬಂದಿದೆ.
ಒಟ್ಟಿನಲ್ಲಿ ಆರೋಪಿ ದರ್ಶನ್ ಅವರನ್ನ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇಟ್ಟ ನಂತರ ಭದ್ರತೆ ದೃಷ್ಟಿಯಿಂದ ರಕ್ತ ಸಂಬಂಧಿಕರನ್ನು ಬಿಟ್ಟು ಯಾರೊಬ್ಬರನ್ನು ಭೇಟಿ ಅವಕಾಶ ಇರಲಿಲ್ಲ. ಕೋರ್ಟ್ ಅನುಮತಿ ನೀಡಿದ ಬಳಿಕ ಆಪ್ತರ ಬೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ನಟ ಧನ್ವೀರ್ ಹಾಗೂ ಆಪ್ತ ಹೇಮಂತ್ ಬಂದಿದ್ದರು.ಇದನ್ನೂ ಓದಿ: ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!
ಇನ್ನೂ ಚೇರ್ ವಿಚಾರದಲ್ಲೂ ಕ್ಲೀಯರ್ ಆಗಿರುವ ಬಳ್ಳಾರಿ ಜೈಲಧಿಕಾರಿಗಳು ಯಾವುದನ್ನೂ ಮೈ ಮೇಲೆ ಎಳೆದುಕೊಳ್ಳದೇ ಕೋರ್ಟ್ ಅವಕಾಶ ಕೊಟ್ಟರೆ ಮಾತ್ರ ಕೊಡುತ್ತೇವೆ ಎಂದು ನಿರ್ಧಾರಕ್ಕೆ ಬಂದಿರುವುದು ದರ್ಶನ್ ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.