ಮನೆಯೂಟ ಕೋರಿ ದರ್ಶನ್‌ ಮನವಿ – ಸೆ.5ರವರೆಗೆ ಜೈಲೂಟವೇ ಗತಿ

Public TV
1 Min Read
Darshan 4 1

ಬೆಂಗಳೂರು: ಮನೆ ಊಟ (Home Food) ಕೋರಿ ದರ್ಶನ್‌ (Darshan) ಸಲ್ಲಿಸಲಾಗಿರುವ ಮನವಿಯ ಅರ್ಜಿಯನ್ನು ಹೈಕೋರ್ಟ್‌ (High Court) ಸೆ.5ಕ್ಕೆ ಮುಂದೂಡಿದೆ.

ಇಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಲಯಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿದ್ದರು. ಇದನ್ನೂ ಓದಿ: ದರ್ಶನ್‌ಗೆ ಸಂಕಷ್ಟ ತಂದೊಡ್ಡುತ್ತಾ ಹೈದರಾಬಾದ್‌ ಎಫ್‌ಎಸ್‌ಎಲ್‌ ವರದಿ?

 

ಮನೆಯೂಟಕ್ಕೆ ಅವಕಾಶ ನೀಡುವಂತೆ ದರ್ಶನ್‌ ಮಾಡಿದ್ದ ಮನವಿಯನ್ನು ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ತಿರಸ್ಕರಿಸಿದ್ದಾರೆ. ಮನವಿ ವಜಾಗೊಂಡ ಹಿನ್ನೆಲೆಯಲ್ಲಿ ವಾದ ಮಂಡನೆಗೆ ಅವಕಾಶ ಕೋರಿ ಪ್ರಭುಲಿಂಗ ನಾವದಗಿ ಮನವಿ ಮಾಡಿದರು. ನಾವದಗಿ ಮನವಿ ಪುರಸ್ಕರಿಸಿದ ಕೋರ್ಟ್‌ ಸೆ.5ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ದರ್ಶನ್ ಆರೋಗ್ಯ ಸ್ಥಿರವಾಗಿದೆ. ದರ್ಶನ್‌ ಅವರಿಗೆ ಮನೆಯೂಟ, ಹಾಸಿಗೆ, ಬಟ್ಟೆ ನೀಡಲು ಸಾಧ್ಯವಿಲ್ಲ. ಆರೋಪಿ ದರ್ಶನ್‌ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮನೆಯೂಟ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದು ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಮನೆಯೂಟ ನಿರಾಕರಿಸಿ ಆದೇಶ ಹೊರಡಿಸಿದ್ದರು.

 

Share This Article