ಇತ್ತೀಚೆಗೆ ದರ್ಶನ್ (Darshan) ತಮ್ಮ ಸಮಯವನ್ನ ಸಿನಿಮಾ ಹಾಗೂ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಮೊದಲೆಲ್ಲಾ ವೀಕೆಂಡ್ ಬಂದ್ರೆ ಫ್ರೆಂಡ್ಸ್ ಜೊತೆ ಸಮಯ ಕಳೆಯುತ್ತಿದ್ದ ದಾಸ ಈಗ ಕುಟುಂಬದ ಜೊತೆ ವೀಕೆಂಡ್ ಕಳೆಯುತ್ತಾರೆ. ಅದಕ್ಕೆ ಸಾಕ್ಷಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಆಗಾಗ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡುವ ಫೋಟೋಗಳು. ಇದೀಗ ದರ್ಶನ್ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಹೊಸ ಸ್ಟೋರಿ ಬಹು ವಿಶೇಷವಾಗಿದೆ.
ಈ ಭಾನುವಾರ ಬೆಳ್ಳಂಬೆಳಗ್ಗೆ ವಿಜಯಲಕ್ಷ್ಮಿ ನಯಾ ಸ್ಟೋರಿ ಹಾಕಿದ್ದಾರೆ. ಇದು ಮೈಸೂರು ಬಳಿಯ ದರ್ಶನ್ ಫಾರ್ಮ್ಹೌಸ್ ಅನ್ನೋದಾಗಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಗಿಳಿ (Pink Parrot) ಜೊತೆ ವಿಜಯಲಯಕ್ಷ್ಮಿಯವರು ಸಮಯ ಕಳೆದ ವೀಡಿಯೋ ಪೋಸ್ಟ್ ಮಾಡಿದ್ದಾರೆ. ದರ್ಶನ್ ಫಾರ್ಮ್ಹೌಸ್‌ನಲ್ಲಿ ಸೊಗಸಾದ ಪಿಂಕ್ ಗಿಳಿಗಳಿದ್ದು ಅದರ ಜೊತೆ ಮುದ್ದಾದ ಆಟದ ದೃಶ್ಯವನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ ವಿಜಯಲಕ್ಷ್ಮಿ. ಇದನ್ನೂ ಓದಿ: ಬಿಗ್ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?
ಪತ್ನಿಯನ್ನ ದರ್ಶನ್ ಮುದ್ದುರಾಕ್ಷಿಸಿ ಎಂದು ಕರೆಯುತ್ತಾರೆ ಎಂದು ಆಗಾಗ ಹೇಳಿಕೊಂಡಿದ್ದಾರೆ. ಹೀಗಾಗಿ ಪಿಂಕ್ ಪ್ಯಾರೊಟ್ ಜೊತೆ ದರ್ಶನ್ ಮುದ್ದು ರಾಕ್ಷಸಿಯ ಮುದ್ದು ಮಾತುಕತೆ ದೃಶ್ಯಕ್ಕೆ ದರ್ಶನ್ ಫ್ಯಾನ್ಸ್ ಕಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತಿವಾಗಿದೆ. ಇದನ್ನೂ ಓದಿ: ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!