ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ (Sumalatha) ಸೇರಿದಂತೆ ಎಲ್ಲರನ್ನೂ ದರ್ಶನ್ ಅನ್‌ಫಾಲೋ ಮಾಡಿದ ವಿಚಾರ ಹಾಟ್ ಟಾಪಿಕ್ ಆಗಿದೆ. ಈ ಬೆನ್ನಲ್ಲೇ ಸುಮಲತಾ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಯಾವತ್ತಿದ್ರೂ ನನ್ನ ಮಗ, ನಾನು ಹಂಚಿಕೊಂಡಿರುವ ಪೋಸ್ಟ್‌ಗೂ ಅವರಿಗೂ ಸಂಬಂಧವಿಲ್ಲ ಎಂದು ವಿವಾದಕ್ಕೆ ನಟಿ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ.. – ದರ್ಶನ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್
ದರ್ಶನ್ (Darshan) ಅನ್‌ಫಾಲೋ ಮಾಡಿರೋದ್ದಕ್ಕೂ ಸುಮಲತಾ ಮಾರ್ಮಿಕವಾಗಿ ಪೋಸ್ಟ್ ಹಾಕಿರೋದ್ದಕ್ಕೂ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಲಿಂಕ್ ಮಾಡಿದರು. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದ ಬೆನ್ನಲ್ಲೇ ಸುಮಲತಾ ಮಾತನಾಡಿ, ಇದೆಲ್ಲಾ ಅನಗತ್ಯವಾದ ವಿವಾದ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ನನಗೆ ಅಷ್ಟು ಸಮಯವೂ ಇಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು.
ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ನನಗೆ ಅಂತ ವಿಶೇಷವಾಗಿ ಯಾಕೆ ಪಾಯಿಂಟ್ ಔಟ್ ಮಾಡುತ್ತೀರಿ, ನನಗೆ ಗೊತ್ತಾಗುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ. ಈ ವಿಚಾರ ನನಗೆ ಈಗ ಗಮನಕ್ಕೆ ಬಂತು. ನಾನು ಜನರಲ್ ಆಗಿ ಪೋಸ್ಟ್ ಮಾಡಿದ್ದೇನೆ. ನಾನು ಬರೆದ ಸಾಲುಗಳಲ್ಲ ಅವು, ಎಲ್ಲೋ ನೋಡಿದ ಪೋಸ್ಟ್ ಹಾಕಿದ್ದೇನಷ್ಟೇ. ಯಾರನ್ನು ಟಾರ್ಗೆಟ್ ಮಾಡಿ, ಯಾರನ್ನು ಉದ್ದೇಶಿಸಿ ಪೋಸ್ಟ್ ಹಾಕಲ್ಲ. ಇನ್ನೂ ದರ್ಶನ್ ಬಗ್ಗೆ ನಾನು ನೆಗೆಟಿವ್ ಮಾತನಾಡುತ್ತೇನಾ? ದರ್ಶನ್ ಯಾವಾತ್ತಿದ್ದರೂ ನನ್ನ ಮಗ ಅಂತ ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅದು ಅವತ್ತಿಗೂ ಅಷ್ಟೇ, ಇವತ್ತಿಗೂ ಅಷ್ಟೇ. ನನ್ನ ಪ್ರೀತಿ ಮತ್ತು ಅಭಿಮಾನ ಯಾವತ್ತಿಗೂ ಒಂದೇ ತರಹ ಇರುತ್ತದೆ. ಆ ಪೋಸ್ಟ್‌ಗೂ, ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ.
ಅವರು ಈಗಷ್ಟೇ ಕಹಿ ಘಟನೆಗಳನ್ನು ಬಿಟ್ಟು ಶೂಟಿಂಗ್ ಶುರು ಮಾಡ್ತಿದ್ದಾರೆ. ಹೀಗಿರುವಾಗ ಹೀಗೊಂದು ನೆಗೆಟಿವ್ ಬರೋದು ಬೇಜಾರ್ ಅನಿಸುತ್ತದೆ. ನನ್ನ ಹತ್ತಿರದವರಿಗೆ, ಕುಟುಂಬದವರನ್ನು ಸಂಪರ್ಕ ಮಾಡಬೇಕು ಅಂದ್ರೆ ನಾನು ಸೋಶಿಯಲ್ ಮೀಡಿಯಾದಲ್ಲಿ ಮಾಡಲ್ಲ. ಇದಕ್ಕೆ ಇಷ್ಟು ಬೆಲೆ ನಾನು ಕೊಡಲ್ಲ. ಸಾಮಾಜಿಕ ಮಾಧ್ಯಮ ಜನರಲ್ ಆಗಿ ಬಳಸುತ್ತೇನೆ. ವೈಯಕ್ತಿಕ ವಿಚಾರಕ್ಕೆ ಬಳಸೋದಿಲ್ಲ. ನನ್ನ ಬದುಕಿನಲ್ಲಿ ನೆಗೆಟಿವ್ಸ್‌ಗೆ ಜಾಗವಿಲ್ಲ. ಮೊಮ್ಮಗನ ಜೊತೆ ಕಾಲ ಕಳೆದುಕೊಂಡು ಖುಷಿಯಾಗಿದ್ದೇನೆ. ಇನ್ನೊಬ್ಬರ ಬಗ್ಗೆ ಕೂಡ ನೆಗೆಟಿವ್ ಹಂಚಿಕೊಳ್ಳಲ್ಲ.
ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ದರ್ಶನ್ ಗುರಿಯಾಗಿಕೊಂಡು ನಾನು ಪೋಸ್ಟ್ ಮಾಡಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ. ಜೈಲಿನಿಂದ ರಿಲೀಸ್ ಆದ್ಮೇಲೆ ದರ್ಶನ್‌ರನ್ನು ಭೇಟಿಯಾದ್ರಾ? ಎಂಬ ಪ್ರಶ್ನೆಗೆ ಅದು ನಮ್ಮ ವೈಯಕ್ತಿಕ ವಿಚಾರ ಎಂದಿದ್ದಾರೆ.